ಇಂದು ರಾತ್ರಿ 8.30ಕ್ಕೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾತ್ರಿ 8.30ಕ್ಕೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಅಧಿಕೃತವಾಗಿ ಘೋಷಿಸಿದೆ.

Ad Widget ... ..

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ವಿಫಲವಾದ ಮರುದಿನವೇ ಪ್ರಧಾನಿ ಮೋದಿ ಅವರು ಈ ಭಾಷಣ ಮಾಡುತ್ತಿರುವುದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

Ad Widget

ಮಸೂದೆಯು ಲೋಕಸಭೆಯಲ್ಲಿ 298 ಮತಗಳ ಪರ ಮತ್ತು 230 ಮತಗಳ ವಿರೋಧದೊಂದಿಗೆ ವಿಫಲವಾಗಿತ್ತು. ಸಂವಿಧಾನ ತಿದ್ದುಪಡಿಗೆ ಅಗತ್ಯವಿದ್ದ ಎರಡು ತೃತೀಯಾಂಶ ಬಹುಮತ (352 ಮತಗಳು) ದೊರೆಯದ ಕಾರಣ ಮಸೂದೆ ತಿರಸ್ಕೃತವಾಗಿತ್ತು.

ಈ ಮಸೂದೆಯೊಂದಿಗೆ ಸಂಬಂಧ ಹೊಂದಿದ್ದ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಲೋಕಸಭಾ ಸೀಟುಗಳ ಸಂಖ್ಯೆ ಹೆಚ್ಚಳಕ್ಕೆ ಸಂಬಂಧಿಸಿದ ಇತರ ಎರಡು ಮಸೂದೆಗಳನ್ನೂ ಮತದಾನಕ್ಕೆ ಇಡಲಾಗಿಲ್ಲ.

ಪ್ರಧಾನಿ ಮೋದಿ ಅವರ ಈ ಭಾಷಣದ ವಿಷಯವನ್ನು ಅಧಿಕೃತವಾಗಿ ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೆ ದೇಶಾದ್ಯಂತ ತೀವ್ರ ಕುತೂಹಲ ಮತ್ತು ಊಹಾಪೋಹಗಳು ಶುರುವಾಗಿವೆ. ಮಹಿಳಾ ಮೀಸಲಾತಿ ಮಸೂದೆಯ ವಿಫಲತೆಯ ಬೆನ್ನಲ್ಲೇ ಪ್ರಧಾನಿ ಏನು ಘೋಷಿಸುತ್ತಾರೆ? ಮಸೂದೆಯ ಬಗ್ಗೆ ಮುಂದಿನ ನಡೆ ಏನು? ಅಥವಾ ಬೇರೆ ಯಾವುದೇ ಮಹತ್ವದ ಘೋಷಣೆ ಮಾಡುತ್ತಾರಾ? ಎಂಬ ಪ್ರಶ್ನೆಗಳು ಜನರ ಮನಸ್ಸಿನಲ್ಲಿ ತುಂಬಿವೆ.

Leave a Comment

Your email address will not be published. Required fields are marked *