ಅಮೇರಿಕಾ ನಡೆ ವಿರೋಧಿಸಿ ಮತ್ತೆ ಹಾರ್ಮೋಜ್ ಬಂದ್ ಮಾಡಿದ ಇರಾನ್

ಸಮಗ್ರ ನ್ಯೂಸ್: ಅಮೆರಿಕ ಜೊತೆಗಿನ ಮಾತುಕತೆ ಭಾಗವಾಗಿ ಹೊರ್ಮುಜ್‌ ಜಲಸಂಧಿಯಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದ ಇರಾನ್‌, ತನ್ನ ನಿರ್ಧಾರವನ್ನು ಹಿಂಪಡೆಯುತ್ತಿರುವುದಾಗಿ ಶನಿವಾರ ಘೋಷಿಸಿದೆ.

Ad Widget ... ..

‘ಇರಾನ್‌ ಬಂದರುಗಳಿಗೆ ಬರುವ ಹಾಗೂ ಅಲ್ಲಿಂದ ತೆರಳುವ ಹಡಗುಗಳ ಮೇಲೆ ನಿರ್ಬಂಧ ಹೇರುವ ಕ್ರಮವನ್ನು ಅಮೆರಿಕ ಮುಂದುವರಿಸಿದೆ. ಆ ಮೂಲಕ ಶಾಂತಿ ಮಾತುಕತೆ ವೇಳೆ ತಾನು ನೀಡಿದ್ದ ಭರವಸೆಯನ್ನು ಮುರಿದಿದೆ’ ಎಂದು ಇರಾನ್‌ನ ಕೇಂದ್ರ ಮಿಲಿಟರಿ ಕಮಾಂಡ್‌ ಪ್ರಕಟಿಸಿದೆ.

Ad Widget

ಇರಾನ್‌ ಬಂದರುಗಳಿಗೆ ಬರುವ ಎಲ್ಲ ಹಡಗುಗಳ ಮುಕ್ತ ಸಂಚಾರವನ್ನು ಅಮೆರಿಕ ಖಾತ್ರಿ ಪಡಿಸುವವರೆಗೂ ಹೊರ್ಮುಜ್‌ ಜಲಸಂಧಿಯನ್ನು ಕಟ್ಟು ನಿಟ್ಟಾಗಿ ನಿಯಂತ್ರಿಸಲಾಗುತ್ತದೆ ಎಂದು ತಿಳಿಸಿದೆ.

Leave a Comment

Your email address will not be published. Required fields are marked *