‘ಇರಾನ್ ತನ್ನೆಲ್ಲಾ‌ ಯುರೇನಿಯಂ ಹಸ್ತಾಂತರಿಸಲು ಒಪ್ಪಿಕೊಂಡಿದೆ’ – ಟ್ರಂಪ್

ಸಮಗ್ರ ನ್ಯೂಸ್: ಜಾಗತಿಕ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸುವಂತಹ ಹೇಳಿಕೆಯೊಂದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ. ಇರಾನ್ ತನ್ನ ಬಳಿ ಇರುವ ಎಲ್ಲಾ ಸಂವರ್ಧಿತ ಯುರೇನಿಯಂ ಅನ್ನು ಅಮೆರಿಕಕ್ಕೆ ಹಸ್ತಾಂತರಿಸಲು ಒಪ್ಪಿಕೊಂಡಿದೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. ಒಂದು ವೇಳೆ ಇದು ನಿಜವಾದಲ್ಲಿ, ಮಧ್ಯಪ್ರಾಚ್ಯದಲ್ಲಿ ಅಣ್ವಸ್ತ್ರ ಪೈಪೋಟಿಗೆ ಬ್ರೇಕ್ ಬೀಳುವ ಸಾಧ್ಯತೆಯಿದೆ.

Ad Widget ... ..

ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ತನ್ನ ಅಣ್ವಸ್ತ್ರ ಕಾರ್ಯಕ್ರಮವನ್ನು ಕೈಬಿಡಲು ಸಿದ್ಧವಾಗಿದೆ ಮತ್ತು ತನ್ನಲ್ಲಿರುವ ಅಪಾಯಕಾರಿ ಯುರೇನಿಯಂ ಅನ್ನು ನಮಗೆ ಒಪ್ಪಿಸಲು ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ.

Ad Widget

ಇರಾನ್ ತನ್ನ ಯುರೇನಿಯಂ ಅನ್ನು ಹಸ್ತಾಂತರಿಸುವುದರಿಂದ ಆ ದೇಶವು ಅಣ್ವಸ್ತ್ರ ತಯಾರಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳಲಿದೆ. ಇದು ಇಡೀ ವಿಶ್ವದ ಸುರಕ್ಷತೆಯ ದೃಷ್ಟಿಯಿಂದ ದೊಡ್ಡ ಜಯ ಎಂದು ಅಮೆರಿಕ ಬಣ್ಣಿಸಿದೆ.

ಈ ಹಿಂದೆ ಅಮೆರಿಕದ ದಿಗ್ಬಂಧನಗಳಿಗೆ ಮಣಿಯದ ಇರಾನ್, ಈಗ ಹಠಾತ್ತನೆ ಯುರೇನಿಯಂ ನೀಡಲು ಒಪ್ಪಿರುವುದು ರಾಜತಾಂತ್ರಿಕ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಟ್ರಂಪ್ ಅವರ ಕಟ್ಟುನಿಟ್ಟಿನ ಆರ್ಥಿಕ ಒತ್ತಡ ತಂತ್ರವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಯುರೇನಿಯಂ ಹಸ್ತಾಂತರಕ್ಕೆ ಪ್ರತಿಯಾಗಿ ಇರಾನ್ ಮೇಲಿರುವ ಆರ್ಥಿಕ ದಿಗ್ಬಂಧನಗಳನ್ನು ಸಡಿಲಗೊಳಿಸಲು ಅಮೆರಿಕ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ.

Leave a Comment

Your email address will not be published. Required fields are marked *