ಬೆಳ್ತಂಗಡಿ: ಬೆಳಾಲು ಸೊಸೈಟಿ ವಂಚನೆ ಪ್ರಕರಣ| ತಲೆ ಮರೆಸಿಕೊಂಡಿದ್ದ ಸಿಬ್ಬಂದಿ ಅರೆಸ್ಟ್

ಸಮಗ್ರ ನ್ಯೂಸ್: ಬೆಳಾಲು ಕೃಷಿಪತ್ತಿನ ಸಹಕಾರಿ ಸಂಘದಲ್ಲಿ ನಡೆದ ಸುಮಾರು 2 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಎರಡನೇ ಆರೋಪಿಯನ್ನು ಧರ್ಮಸ್ಥಳ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬೆಳಾಲು ನಿವಾಸಿ ಪ್ರಶಾಂತ್ ಬಿ. ಎಂದು ಗುರುತಿಸಲಾಗಿದೆ.

Ad Widget ... ..

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸದಾಶಿವ ಯಾನೆ ಸುಜಿತ್ ಅವರನ್ನು ಪೊಲೀಸರು ಬಂಧಿಸಿದ್ದರು. ಇನ್ನೊಬ್ಬ ಆರೋಪಿಯಾಗಿದ್ದ ಪ್ರಶಾಂತ್ ಕಳೆದ ಕೆಲವು ದಿನಗಳಿಂದ ಪರಾರಿಯಾಗಿದ್ದನು. ಪೊಲೀಸರ ಮಾಹಿತಿ ಪ್ರಕಾರ, ಸಹಕಾರಿ ಸಂಘದ ಸಿಬ್ಬಂದಿಗಳಾದ ಸದಾಶಿವ ಯಾನೆ ಸುಜಿತ್ ಹಾಗೂ ಪ್ರಶಾಂತ್ ಬಿ. ಅವರು 2022ರ ಫೆಬ್ರವರಿ 18ರಿಂದ 2025ರ ಮಾರ್ಚ್ 25ರವರೆಗೆ ಒಟ್ಟು 2,12,08,328.15 ರೂ.ಗಳನ್ನು ವಂಚಿಸಿರುವ ಆರೋಪ ಎದುರಿಸುತ್ತಿದ್ದಾರೆ.

Ad Widget

ಸಂಘದ ಠೇವಣಿ ರಶೀದಿಗಳನ್ನು ಕಳವು ಮಾಡಿ, ನಿಧಿಯನ್ನು ದುರ್ಬಳಕೆ ಮಾಡಿರುವುದಾಗಿ ಸಂಘದ ಅಧ್ಯಕ್ಷ ಪದ್ಮಗೌಡ ಅವರು ದೂರು ದಾಖಲಿಸಿದ್ದರು. ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ಇಬ್ಬರು ಆರೋಪಿಗಳನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Leave a Comment

Your email address will not be published. Required fields are marked *