‘ಶಿಳ್ಳೆ ಹಾಕಿದ್ದು ಯಾರು? ಇಷ್ಟವಿಲ್ಲದಿದ್ರೆ ಬನ್ಸ್ ತಿಂದು ಹೋಗಿ”| ಯಕ್ಷರಂಗದಿಂದಲೇ ಪ್ರೇಕ್ಷಕರ ವಿರುದ್ಧ ಕಲಾವಿದ ಅಶೋಕ್ ಭಟ್ ಉಜಿರೆ ಗರಂ

ಸಮಗ್ರ ನ್ಯೂಸ್: ಕುಂದಾಪುರದ ಹೆನ್ನಾಬೈಲಿನಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರು ಆಯೋಜಿಸಿದ್ದ ಯಕ್ಷಗಾನ ಪ್ರದರ್ಶನದ ವೇಳೆ ಕಲಾವಿದ ಉಜಿರೆ ಅಶೋಕ್ ಭಟ್ ಪ್ರೇಕ್ಷಕರ ವಿರುದ್ಧ ಗರಂ ಆಗಿದ್ದಾರೆ.

Ad Widget ... .. Ad Widget .

ಭಾಗವತರು ಪದ್ಯಗಳೊಂದಿಗೆ ಆಲಾಪನೆ ನಡೆಸುತ್ತಿದ್ದಾಗ, ಕೆಲ ಪ್ರೇಕ್ಷಕರು ಶಿಳ್ಳೆ ಹಾಕಿದಿದ್ದರು. ಪದ್ಯ ಮುಗಿದ ಬಳಿಕ ಕೃಷ್ಣನ ಪಾತ್ರದಲ್ಲಿ ಅಭಿನಯಿಸುತ್ತಿದ್ದ ಅಶೋಕ್ ಭಟ್, ವೇದಿಕೆಯಲ್ಲೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನೀವು ಶಿಳ್ಳೆ ನಿಲ್ಲಿಸದಿದ್ದರೆ ನಾನು ಹೋಗುತ್ತೇನೆ. ಇದು ಯಕ್ಷಗಾನವೋ? ಕಂಬಳವೋ? ನಿಮಗೆ ಈ ಕ್ಷೇತ್ರದ ಮೌಲ್ಯ ಗೊತ್ತಿದೆಯೇ?” ಎಂದು ಅವರು ಪ್ರಶ್ನಿಸಿ, ಪ್ರೇಕ್ಷಕರ ಗಮನ ಸೆಳೆದರು.

Ad Widget

ಅಶೋಕ್ ಭಟ್ ಹೆಚ್ಚಿನ ಅಕ್ರೋಶದಲ್ಲಿ, “ಹುಚ್ಚರನ್ನು ಬೆಳೆಸಬೇಡಿ. ಕಲಾವಿದರನ್ನು ಬೆಳೆಸಿ. ಭಾಗವತರ ಕಂಠ ಹಾಳು ಮಾಡುವುದಿಲ್ಲವೋ?” ಎಂದು ಹತ್ತಿರದವರಿಗೂ ಮನವಿ ಮಾಡಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ಪರ-ವಿರೋಧ ಚರ್ಚೆಗಳು ಶುರುವಾಗಿವೆ. ಕೆಲವರು ಕಲಾವಿದನ ಧೈರ್ಯವನ್ನು ಮೆಚ್ಚಿದ್ದು, ಕೆಲವರು ಪ್ರೇಕ್ಷಕರ ವೈಚಾರಿಕ ಹಕ್ಕಿನ ಕಡೆ ಒತ್ತಡವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *