110 ಸೈನಿಕರನ್ನು ಕೊತ್ತೊಯ್ಯುತ್ತಿದ್ದ ಕೊಲಂಬಿಯಾದ ಮಿಲಿಟರಿ ವಿಮಾನ ಪತನ

ಸಮಗ್ರ ನ್ಯೂಸ್: ಸುಮಾರು 110 ಜನರನ್ನು ಹೊತ್ತೊಯ್ಯುತ್ತಿದ್ದ ಕೊಲಂಬಿಯಾದ ಮಿಲಿಟರಿ ವಿಮಾನ ಸೋಮವಾರ (ಮಾರ್ಚ್‌ 23) ಪತನವಾಗಿದೆ ಕೊಲಂಬಿಯಾದ ಪೋರ್ಟೊ ಲೆಗುಯಿಜಾಮೊದ ದಕ್ಷಿಣ ಪ್ರದೇಶದಲ್ಲಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ಮೂಲಗಳು ತಿಳಿಸಿವೆ.

. Ad Widget . Ad Widget

ಘಟನೆಯಲ್ಲಿ ಕನಿಷ್ಠ 80 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. 20 ಮಂದಿ ಗಾಯಗೊಂಡಿದ್ದಾರೆ. ʼʼಲಾಕ್‌ಹೀಡ್ ಮಾರ್ಟಿನ್ ಹರ್ಕ್ಯುಲಸ್ ಸಿ -130 ವಿಮಾನವು ಕೊಲಂಬಿಯಾದ ದಕ್ಷಿಣ ಅಮೆಜಾನ್ ಪ್ರದೇಶದ ಪೆರುವಿನ ಗಡಿಯ ಸಮೀಪದಲ್ಲಿರುವ ಪೋರ್ಟೊ ಲೆಗುಯಿಜಾಮೊದಿಂದ ಸಶಸ್ತ್ರ ಪಡೆಗಳ ಸೈನಿಕರನ್ನು ಕರೆದೊಯ್ಯುತ್ತಿದ್ದಾಗ ಈ ಅಪಘಾತ ಸಂಭವಿಸಿದೆʼʼ ಎಂದು ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಝ್‌ (Pedro Sánchez) ಅವರನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

. Ad Widget . . Ad Widget . Ad Widget

“ಮೃತರ ನಿಖರ ಸಂಖ್ಯೆ ಇನ್ನೂ ತಿಳಿದು ಬಂದಿಲ್ಲ. ಜತೆಗೆ ಅಪಘಾತದ ಕಾರಣವೂ ಗೊತ್ತಾಗಿಲ್ಲ” ಎಂದು ಪೆಡ್ರೊ ಸ್ಯಾಂಚೆಝ್‌ ಹೇಳಿದ್ದಾರೆ. “ರಕ್ಷಣಾ ಘಟಕಗಳು ಸ್ಥಳಕ್ಕೆ ಧಾವಿಸಿವೆ. ಇದು ದೇಶಕ್ಕೆ ತೀವ್ರ ನೋವಿನ ಘಟನೆ. ನಮ್ಮ ಪ್ರಾರ್ಥನೆಗಳು ಸ್ವಲ್ಪ ಮಟ್ಟಿಗೆ ಸಾಂತ್ವನವನ್ನು ತರಲಿ” ಎಂದು ನೋವು ತೋಡಿಕೊಂಡಿದ್ದಾರೆ.

Leave a Comment

Your email address will not be published. Required fields are marked *