ಚುನಾವಣಾ ಪ್ರಚಾರಕ್ಕೆ ಮೋದಿ ಕರೆತರಲು 33 ಕೋಟಿ ಖರ್ಚು ಮಾಡಿದ್ದ ಕರ್ನಾಟಕದ ಬಿಜೆಪಿ ಸರ್ಕಾರ| ಮಾಹಿತಿ ಹಕ್ಕು ಕಾಯ್ದೆಯಡಿ ವಿಚಾರ ಬಯಲು

ಸಮಗ್ರ ನ್ಯೂಸ್: 2023ರ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ಒಂದು ದಿನದ ಎರಡು ಕಾರ್ಯಕ್ರಮಗಳಿಗೆ ಅಂದಿನ ಬಿಜೆಪಿ ಸರ್ಕಾರ ₹33 ಕೋಟಿ ಖರ್ಚು ಮಾಡಿತ್ತು. ಈ ಕಾರ್ಯಕ್ರಮಕ್ಕೆ ಜನರನ್ನು ಕರೆತರಲೆಂದೇ ₹6.5 ಕೋಟಿ ಖರ್ಚು ಮಾಡಲಾಗಿದೆ.

Ad Widget ... ..

‘ಲಂಚಮುಕ್ತ ಕರ್ನಾಟಕ’ ಸಂಘಟನೆಯ ಮಂಜುನಾಥ ಹಿರೇಚೌಟಿ ಅವರು ಮಾಹಿತಿ ಹಕ್ಕು ಅಡಿ ಪಡೆದ ದಾಖಲೆಗಳಲ್ಲಿ ಈ ಮಾಹಿತಿ ಇದೆ. 2023ರ ಫೆಬ್ರುವರಿ 27ರಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮ ನೆರವೇರಿತ್ತು. ಇದಕ್ಕೆ ₹18.81 ಕೋಟಿ ಖರ್ಚು ಮಾಡಲಾಗಿತ್ತು.

Ad Widget

ಈ ಕಾರ್ಯಕ್ರಮಕ್ಕೆ ವಿವಿಧ ಕಡೆಗಳಿಂದ ಜನರನ್ನು ಕರೆ ತರಲು 1,800 ಬಸ್‌ಗಳನ್ನು ಬಳಸಿಕೊಳ್ಳಲಾಗಿತ್ತು. ಇದಕ್ಕಾಗಿ ₹4.11 ಕೋಟಿ ವೆಚ್ಚ ಮಾಡಲಾಗಿತ್ತು. ಪ್ರಧಾನಿ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯವರ ಭಾಷಣದ ವೇದಿಕೆಗೆ ಮಳೆ ನಿರೋಧಕ ಜರ್ಮನ್‌ ಮಾದರಿಯ ಪೆಂಡಾಲ್‌ ಹಾಕಲು, ಗ್ರೀನ್ ರೂಂ, ಸ್ಟಾಲ್‌ಗಳು ಮತ್ತು ಹೂವಿನ ಅಲಂಕಾರಕ್ಕಾಗಿ ₹1.8 ಕೋಟಿ ವೆಚ್ಚ ಮಾಡಲಾಗಿತ್ತು. ಇವೆಲ್ಲದಕ್ಕೂ ವೆಚ್ಚ ಮಾಡಲು, ಲೋಕೋಪಯೋಗಿ ಇಲಾಖೆ ಕೆಟಿಪಿಪಿ ಕಾಯ್ದೆಯ ಸೆಕ್ಷನ್‌ 4(ಜಿ) ಅಡಿ ವಿನಾಯ್ತಿ ಪಡೆದಿತ್ತು.

ಈ ಕಾರ್ಯಕ್ರಮದ ಬಳಿಕ ಬೆಳಗಾವಿಯಲ್ಲಿ ನಡೆದ ಮತ್ತೊಂದು ಕಾರ್ಯಕ್ರಮಕ್ಕೆ ₹14.35 ಕೋಟಿ ವೆಚ್ಚ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಜನರನ್ನು ಕರೆದುಕೊಂಡು ಬರಲೆಂದೇ ₹2.5 ಕೋಟಿ ವೆಚ್ಚ ಮಾಡಲಾಗಿತ್ತು. ಮಂಜುನಾಥ ಅವರು ಈ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಲು 2023ರ ಮಾರ್ಚ್‌ನಲ್ಲಿ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರು. 2026ರ ಜನವರಿಯಲ್ಲಿ ಮಾಹಿತಿ ಪಡೆಯಲು ಯಶಸ್ವಿಯಾದರು.

Leave a Comment

Your email address will not be published. Required fields are marked *