ಬೆಳ್ತಂಗಡಿ: ಪ್ರಗತಿಪರ‌ ಕೃಷಿಕ ದೇವಿಪ್ರಸಾದ್ ಕಡಮ್ಮಾಜೆಗೆ ‘ನ್ಯೂಸ್18 ವರ್ಷದ ಕನ್ನಡಿಗ’ ಪ್ರಶಸ್ತಿ

ಸಮಗ್ರ ನ್ಯೂಸ್: ಕೃಷಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ಸಾವಯವ ಪ್ರಗತಿಪರ ಕೃಷಿಕ ದೇವಿಪ್ರಸಾದ್ ಕೆ. ಗೌಡ ಅವರಿಗೆ ಈ ವರ್ಷದ ‘ಕನ್ನಡಿಗ 2026’ ಪ್ರಶಸ್ತಿ ಲಭಿಸಿದೆ. News18 Kannada ಅರ್ಪಿಸುವ ಈ ಗೌರವವನ್ನು ಮಾರ್ಚ್ 03ರಂದು ಬೆಂಗಳೂರಿನಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಕಂದಾಯ ಸಚಿವ ಕೃಷ್ಣಬೈರೇಗೌಡಅವರು ಪ್ರಶಸ್ತಿ ನೀಡಿ ಸನ್ಮಾನಿಸಿದರು.

Ad Widget ... .. Ad Widget .

ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಕಡಮ್ಮಾಜೆ ಫಾರ್ಮ್ಸ್‌ನ ಎಲ್.ಎಲ್.ಬಿ ಪದವೀಧರ ದೇವಿಪ್ರಸಾದ್ ಕೆ. ಗೌಡ ಅವರು ದಿವಂಗತ ದಿನಕರ ಗೌಡ ದಂಪತಿಗಳ ಪುತ್ರರು. ಅಡಿಕೆ, ತೆಂಗು, ಕಾಳು ಮೆಣಸು, ಹಣ್ಣು-ಹಂಪಲು ಬೆಳೆಗಳೊಂದಿಗೆ ಮೀನುಗಾರಿಕೆ, ಕೋಳಿಸಾಕಣೆ, ಹೈನುಗಾರಿಕೆ ಹಾಗೂ ವಿವಿಧ ಪ್ರಾಣಿ-ಪಕ್ಷಿಗಳ ಸಾಕಣೆ ಮಾಡುವ ಮೂಲಕ ಸಮಗ್ರ ಹಾಗೂ ಸುಸ್ಥಿರ ಕೃಷಿ ಮಾದರಿಯನ್ನು ಅಳವಡಿಸಿಕೊಂಡಿದ್ದಾರೆ.

Ad Widget

ಸಾವಯವ ಕೃಷಿಯಲ್ಲಿ ಕುಟುಂಬದ ಎಲ್ಲ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ತಾಯಿ ಕುಸುಮ, ಪತ್ನಿ, ಮಕ್ಕಳು ಹಾಗೂ ಸಹೋದರ ದಂಪತಿಗಳು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ.

ಈ ಸಂದರ್ಭದಲ್ಲಿ ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ನ್ಯೂಸ್ 18 ಕನ್ನಡ ಸಂಪಾದಕ ಹರಿಪ್ರಸಾದ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಸಿನಿಮಾ ತಾರೆಯರು ಮತ್ತು ಸಾಧಕರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *