ನೇಮಕಗೊಂಡ ಒಂದೇ ದಿನಕ್ಕೆ ಇರಾನ್ ನ ರಕ್ಷಣಾ ಸಚಿವನ ಹತ್ಯೆ

ಸಮಗ್ರ ನ್ಯೂಸ್: ಇರಾನ್ ಅಕ್ಷರಶಃ ತತ್ತರಿಸಿ ಹೋಗಿದೆ. ಇಸ್ರೇಲ್ ಹಾಗೂ ಅಮೆರಿಕ ನಡೆಸುತ್ತಿರುವ ದಾಳಿಯಲ್ಲಿ ಸಾವು ನೋವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇಷ್ಟೇ ಅಲ್ಲ ಇರಾನ್ ಪ್ರಮುಖರೇ ಬಲಿಯಾಗುತ್ತಿದ್ದಾರೆ. ಇರಾನ್ ಸೇನಾ ಮುಖ್ಯಸ್ಥನ ಬೆನ್ನಲ್ಲೇ ಸರ್ವೋಚ್ಚ ನಾಯಕ ಅಯತೊಲ್ಲ ಖಮೇನಿಯನ್ನು ಹತ್ಯೆ ಮಾಡಲಾಗಿತ್ತು.

. Ad Widget . Ad Widget

ಇದೀಗ ಇರಾನ್ ನೂತನವಾಗಿ ನೇಮಕ ಮಾಡಿದ ರಕ್ಷಣಾ ಸಚಿವ ಸಯ್ಯದ್ ಮಜೀದ್ ಎಬಾ ಅಲ್ ರೆಜಾ ಹತ್ಯೆಯಾಗಿದ್ದಾರೆ. ಅಮೇರಿಕ ಹಾಗೂ ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ನೂತನ ಸಚಿವ ಹತ್ಯೆಯಾಗಿರುವುದಾಗಿ ಸ್ಪೆಕ್ಟೇಟರ್ ಇಂಡೆಕ್ಸ್ ವರದಿ ಮಾಡಿದೆ.

. Ad Widget . . Ad Widget . Ad Widget

ಎರಡು ದಿನದ ಹಿಂದೆ ಇಸ್ರೇಲ್ ಹಾಗೂ ಅಮೆರಿಕ ದಾಳಿಗೆ ಇರಾನ್ ರಕ್ಷಣಾ ಸಚಿವ ಅಮಿರ್ ನಾಸಿರ್‌ಜದೇಹ್ ಹತ್ಯೆಯಾಗಿದ್ದರು. ಹೀಗಾಗಿ ಇರಾನ್ ಹಂಗಾಮಿ ನಾಯಕನ ಆಯ್ಕೆ ವೇಳೆ ನೂತನ ರಕ್ಷಣಾ ಸಚಿವರಾಗಿ ಸಯ್ಯದ್ ಮಜೀದ್ ಎಬಾ ಅಲ್ ರೆಜಾ ಆಯ್ಕೆ ಮಾಡಲಾಗಿತ್ತು. ಆಯ್ಕೆಯಾದ ಒಂದೇ ದಿನಕ್ಕೆ ಇಸ್ರೇಲ್ ಹಾಗೂ ಅಮೆರಿಕ ಟಾರ್ಗೆಟ್ ಮಾಡಿ ದಾಳಿ ನಡೆಸಿ ಹತ್ಯೆ ಮಾಡಿದೆ ಎಂದು ವರದಿಯಾಗಿದೆ.

Leave a Comment

Your email address will not be published. Required fields are marked *