ಭೀಕರ ಅಪಘಾತಕ್ಕೆ ಏಳು ಮಂದಿ ಬಲಿ

ಸಮಗ್ರ ನ್ಯೂಸ್: ಭೀಕರ ರಸ್ತೆ ಅಪಘಾತಕ್ಕೆ 7 ಮಂದಿ ಸಾವನ್ನಪ್ಪಿರುವ ಘಟನೆ ಹೊಸಕೋಟೆ ತಾಲೂಕಿನ ಎಂ ಸತ್ಯಾವರ ಬಳಿ ಘಟನೆ ನಡೆದಿದೆ. ಕಾರು, ಕ್ಯಾಂಟರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ 6 ಜನ ಹಾಗೂ ಬೈಕ್ ನಲ್ಲಿದ್ದ ಬರ್ತಿದ್ದ ಸವಾರ ಸಾವನ್ನಪ್ಪಿದ್ದಾರೆ.

Ad Widget ... ..

ಮೊದಲಿಗೆ ಕ್ಯಾಂಟರ್ ಬೈಕ್​​ಗೆ ಡಿಕ್ಕಿ ಹೊಡೆದಿದೆ ನಂತರ ಕ್ಯಾಂಟರ್​ನ ಚಾರ್ಸಿ ಕಟ್ ಆಗಿದೆ. ಬಳಿಕ ಕ್ಯಾಂಟರ್​ ಮುಂದೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಹಿನ್ನಲೆ ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಆರು ಜನ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದವರೆಲ್ಲಾ ಕೊತ್ತನೂರು ಮೂಲದವರು ಎಂದು ತಿಳಿದು ಬಂದಿದೆ. ಕಾರಿನಲ್ಲಿ ಕೋಲಾರದಿಂದ ದೇವನಹಳ್ಳಿಗೆ ಪ್ರಯಾಣ ಬೆಳೆಸುತ್ತಿದ್ದರು.

Ad Widget

ಮೊದಲು ದ್ವಿಚಕ್ರ ವಾಹನ ಮತ್ತು ಕ್ಯಾಂಟರ್‌ ನಡುವೆ ಅಪಘಾತ ವಾಗಿದ್ದು, ಅತೀ ವೇಗವೇ ಅಪಘಾತಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಐಜಿ ಲಾಭೂ ರಾಮ್ ಅವರು ಅಪಘಾತ ಸಂಬಂಧ ಮಾಹಿತಿ ನೀಡಿದ್ದಾರೆ. ಇಂದು ಬೆಳಗಿನ ಜಾವ ಅಪಘಾತ ನಡೆದಿದೆ. ಮೊದಲು ಟ್ಯಾಕ್ಸಿ ದ್ವಿಚಕ್ರ ವಾಹನಕ್ಕೆ ಗುದ್ದಿದೆ. ಆಗ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ್ದಾನೆ.ಈಗಾಗಲೇ ಮೂರು ಜನರ ಮಾಹಿತಿ ಕಲೆ ಹಾಕಿದ್ದೇವೆ‌. ಉಳಿದವರ ಮಾಹಿತಿಯನ್ನ ಕಲೆ ಹಾಕಲಾಗುತ್ತಿದೆ. ಮೃತರ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ತನಿಖೆ ಮುಂದುವರಿದಿದೆ ಎಂದಿದ್ದಾರೆ.

ಹೊಸಕೋಟೆ ತಾಲ್ಲೂಕಿನ ಎಂ.ಸತ್ಯಾವರ ಬಳಿ ನಡೆದಿದ್ದ ಅಪಘಾತದಲ್ಲಿ ಮೃತ ಬೈಕ್ ಸವಾರ ದೇವನಹಳ್ಳಿ ಮೂಲದ ಗಗನ್ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಆರು ಜನರ ಪೈಕಿ ಪೊಲೀಸರು ಇಬ್ಬರ ಮಾಹಿತಿ ನೀಡಿದ್ದಾರೆ. ಬೆಂಗಳೂರು ಮೂಲದ ಅಶ್ವಿನ್, ಕರಣ್ ಆಲಿ ಕಾರಿನಲ್ಲಿದ್ದ ಮೃತ ದುರ್ದೈವಿಗಳಾಗಿದ್ದಾರೆ. ಇನ್ನು ಉಳಿದ ಮೃತರ ಮಾಹಿತಿಯನ್ನ ಪೊಲೀಸರು ಕಲೆ ಹಾಕುತ್ತಿದ್ದಾರೆ.

Leave a Comment

Your email address will not be published. Required fields are marked *