‘ಶಕ್ತಿ’ ಯೋಜನೆಯ ಉಚಿತ ಪ್ರಯಾಣಕ್ಕೆ ಬೇಕು ಸ್ಮಾರ್ಟ್ ಕಾರ್ಡ್| ಆಧಾರ್ ತೋರಿಸಿ ಪ್ರಯಾಣ ಇನ್ನಿಲ್ಲ

ಸಮಗ್ರ ನ್ಯೂಸ್: ಆಧಾರ್ ಕಾರ್ಡ್ ತೋರಿಸಿ ಕೆಎಸ್​​ಆರ್​ಟಿಸಿ, ಬಿಎಂಟಿಸಿ ಬಸ್‌ ಹತ್ತಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ದಿನಗಳು ಇನ್ನೇನು ಮುಗಿಯಲಿವೆ. ರಾಜ್ಯದ ಮಹಿಳೆಯರಿಗೆ ಸಂಜೀವಿನಿಯಾಗಿರುವ ‘ಶಕ್ತಿ’ ಯೋಜನೆಗೆ ಇನ್ಮುಂದೆ ಕೇವಲ ಗುರುತಿನ ಚೀಟಿ ತೋರಿಸಿದರೆ ಸಾಲದು, ಸರ್ಕಾರ ನೀಡುವ ‘ಶಕ್ತಿ ಸ್ಮಾರ್ಟ್ ಕಾರ್ಡ್’ ನಿಮ್ಮ ಬಳಿ ಇರಲೇಬೇಕು.

Ad Widget ... ..

ಯೋಜನೆ ಜಾರಿಯಾದಾಗಿನಿಂದಲೂ ಮಹಿಳೆಯರು ಆಧಾರ್ ಕಾರ್ಡ್ ಮತ್ತು ಫೋಟೋ ಐಡಿ ತೋರಿಸಿ ಶೂನ್ಯ ದರದ ಟಿಕೆಟ್ ಪಡೆಯುತ್ತಿದ್ದಾರೆ. ಆದರೆ, ಇದರಲ್ಲಿ ಸಾಕಷ್ಟು ಗೊಂದಲಗಳಿವೆ. ಆಧಾರ್ ಕಾರ್ಡ್‌ ಅಸ್ಪಷ್ಟವಾಗಿರುವುದು, ಫೋಟೋ ಮ್ಯಾಚ್ ಆಗದಿರುವುದು ಮತ್ತು ಅನ್ಯ ರಾಜ್ಯದವರು ನಕಲಿ ಐಡಿ ತೋರಿಸಿ ಪ್ರಯಾಣಿಸುವಂತಹ ಪ್ರಕರಣಗಳು ನಿರ್ವಾಹಕರ ಗಮನಕ್ಕೆ ಬಂದಿವೆ. ಹೀಗಾಗಿ, “ಆಧಾರ್ ತೋರಿಸಿದ್ರೆ ಆಗಲ್ಲ, ಸ್ಮಾರ್ಟ್ ಕಾರ್ಡ್ ಬೇಕೇಬೇಕು” ಎಂಬ ನಿಯಮ ಜಾರಿಗೆ ತರಲು ಸರ್ಕಾರ ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.

Ad Widget

ಹೊಸ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಸಂಪೂರ್ಣ ಹೈಟೆಕ್ ಆಗಿರಲಿದೆ. ನಿರ್ವಾಹಕರ ಬಳಿ ಇರುವ ಟಿಕೆಟ್ ಮಷಿನ್‌ಗೆ (ETM) ಈ ಸ್ಮಾರ್ಟ್ ಕಾರ್ಡ್ ಅನ್ನು ಸ್ಪರ್ಶಿಸಿದರೆ (Tap) ಮಾತ್ರ ಉಚಿತ ಟಿಕೆಟ್ ಜನರೇಟ್ ಆಗುತ್ತದೆ. ಕೇವಲ ಕಣ್ಣಿನ ಅಂದಾಜಿನಲ್ಲಿ ಐಡಿ ಕಾರ್ಡ್ ನೋಡಿ ಟಿಕೆಟ್ ಕೊಡುವ ಪದ್ಧತಿ ರದ್ದಾಗಲಿದೆ. ಇದರಿಂದ ನಿಜವಾದ ಫಲಾನುಭವಿಗಳು ಯಾರು ಎಂಬುದು ನಿಖರವಾಗಿ ತಿಳಿಯಲಿದ್ದು, ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ಸೋರಿಕೆ ತಪ್ಪಲಿದೆ.

ಬಸ್‌ ಹತ್ತಿದಾಗ ತಡಕಾಡುವುದು ತಪ್ಪಬೇಕೆಂದರೆ ನೀವು ಇಂದೇ ಎಚ್ಚೆತ್ತುಕೊಳ್ಳಬೇಕು. ಸೇವಾ ಸಿಂಧು ಪೋರ್ಟಲ್ ಅಥವಾ ಸರ್ಕಾರಿ ಗ್ಯಾರಂಟಿ ಯೋಜನೆಗಳ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಂಡು ಈ ಕಾರ್ಡ್ ಪಡೆಯಬಹುದು. ವಿಶೇಷವೆಂದರೆ, ಸರ್ಕಾರವೇ ಇದನ್ನು ಉಚಿತವಾಗಿ ನೀಡುತ್ತಿರುವುದರಿಂದ ಪ್ರಯಾಣಿಕರು ಹಣ ಕೊಡುವ ಅಗತ್ಯವಿಲ್ಲ ಎನ್ನಲಾಗಿದೆ.

Leave a Comment

Your email address will not be published. Required fields are marked *