ಮಾರ್ಕೆಟ್ ರಸ್ತೆಯಲ್ಲಿ ಕಂಡು ಬಂತು ಕತ್ತರಿಸಿದ ಕೈ ತುಂಡು| ಕೈ ಕಂಡು ಬೆಚ್ಚಿಬಿದ್ದ ಜನ|

ಬೆಂಗಳೂರು: ರಸ್ತೆ ಮೇಲೆ ಬಿದ್ದಿದ್ದ ಕತ್ತರಿಸಿ ಹಾಕಲಾಗಿದ್ದ ಕೈ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Ad Widget ... ..

ಬೆಂಗಳೂರಿನ ಕೊಡಿಗೇಹಳ್ಳಿ ಮುಖ್ಯರಸ್ತೆಯ ಮೋರ್ ಶೋರೂಂ ಬಳಿ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಯಾರೋ ಕಿಡಿಗೇಡಿಗಳು ಕೊಡಿಗೇಹಳ್ಳಿ ಮುಖ್ಯರಸ್ತೆಯ ಮೋರ್ ಶೋ ರೂಂ ಬಳಿ ಮುಂಗೈ ಒಂದನ್ನು ಎಸೆದು ಹೋಗಿದ್ದರು.

Ad Widget

ಇದನ್ನು ಕಂಡ ಜನ ಮನುಷ್ಯರ ಕೈ ಕಟ್ ಮಾಡಿ ಎಸೆದಿದ್ದಾರೆ ಎಂದು ಬೆಚ್ಚಿಬಿದಿದ್ದಾರೆ.

ಕೃತಕ ಮುಂಗೈ ರಸ್ತೆಯಲ್ಲಿ ಬಿದ್ದಿದ್ದನ್ನು ಕಂಡು ಜನರಿಗೆ ಗಾಬರಿಯಾಗಿದೆ. ಹಂತಕರು ಮನುಷ್ಯನನ್ನು ಕೊಲೆ ಮಾಡಿ ಆತನ ಕೈಯನ್ನು ಕತ್ತರಿಸಿ ಈ ರೀತಿ ರಸ್ತೆಗೆ ಎಸೆದಿದ್ದಾರೆ ಎಂದು ಭಾವಿಸಿ ಜನ ಆತಂಕಕ್ಕೆ ಒಳಗಾಗಿದ್ದರು. ಅಲ್ಲದೆ ರಸ್ತೆಯಲ್ಲಿ ಮುಂಗೈ ಬಿದ್ದಿರುವುದನ್ನು ಕಂಡ ಸ್ಥಳೀಯರು ಹೌಹಾರಿ ತಕ್ಷಣವೇ ಕೊಡಿಗೇಹಳ್ಳಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು‌.

ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮುಂಗೈ ಕೃತಕ ಎಂಬುದು ಪತ್ತೆ ಮಾಡಿದ್ದಾರೆ. ಸದ್ಯ ಜನರ ಆತಂಕ ದೂರವಾಗಿದೆ.

Leave a Comment

Your email address will not be published. Required fields are marked *