ಸಮಗ್ರ ನ್ಯೂಸ್: ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದ ‘ಮಹಾನಟಿ ಸೀಸನ್ 2’ನ ವಿನ್ನರ್ ಆಗಿ ಮಂಗಳೂರಿನ ವಂಶಿ ಹೊರ ಹೊಮ್ಮಿದ್ದಾರೆ. ಕಳೆದ ಕೆಲ ತಿಂಗಳಿಂದ ತಮ್ಮ ನಟನಾ ಪ್ರತಿಭೆಯನ್ನು ತೋರಿಸುತ್ತಾ ಬರುತ್ತಿದ್ದ ಅವರು, ಈಗ ಕಪ್ ಗೆದ್ದಿದ್ದಾರೆ. ಬೆಳಗಾವಿಯ ವರ್ಷಾ ಡಿಗ್ರಜೆ ಅವರು ಮೊದಲ ರನ್ನರ್ ಅಪ್ ಆದರು.
ವಿನ್ ಆದ ಬಳಿಕ ಮಾತನಾಡಿದ ವಂಶಿ ಅವರು, ‘ತುಂಬಾ ಖುಷಿ ಆಗ್ತಿದೆ. ಬಿ ಸರೋಜಾ ದೇವಿ ಅವರನ್ನು ನೋಡಿಲ್ಲ ನಾನು. ಆದರೆ, ಅವರ ನಟನೆಯನ್ನು ನೋಡಿಕೊಂಡು ಬಂದಿದ್ದೇನೆ. ಈ ಟ್ರೋಫಿ ಮೂಲಕ ಅವರ ಆಶೀರ್ವಾದ ನನಗಿದೆ. ನಟಿ ಆಗಬೇಕು ಎಂಬ ಕನಸು ಕಂಡ ನನಗೆ ಇದು ಸಣ್ಣ ಹೆಜ್ಜೆ’ ಎಂದಿದ್ದಾರೆ ವಂಶಿ.
‘ಮಹಾನಟಿ ಸೀಸನ್ 2’ನಲ್ಲಿ ರಮೇಶ್ ಅರವಿಂದ್, ನಿಶ್ವಿಕಾ ನಾಯ್ಡು, ತರುಣ್ ಸುಧೀರ್ ಅವರು ಜಡ್ಜ್ ಸ್ಥಾನದಲ್ಲಿ ಇದ್ದರು. ಒಳ್ಳೆಯ ರೀತಿಯಲ್ಲಿ ಅವರು ಶೋ ನಡೆಸಿಕೊಟ್ಟಿದ್ದಾರೆ. ಶನಿವಾರ (ನವೆಂಬರ್ 8) ಹಾಗೂ ಭಾನುವಾರ (ನವೆಂಬರ್ 9) ಫಿನಾಲೆ ಪ್ರಸಾರ ಕಂಡಿದೆ.
ಮಹಾನಟಿ ಸೀಸನ್-2 ಮಂಗಳೂರಿನ ವಂಶಿ ರತ್ನಾಕರ್ ವಿಜಯಶಾಲಿಯಾಗಿದ್ದಾರೆ. ವೈಟ್‌ಗೋಲ್ಡ್ ವತಿಯಿಂದ 15 ಲಕ್ಷ ರೂ. ಮೌಲ್ಯದ ಚಿನ್ನದ ಕಿರೀಟ ಸಿಕ್ಕಿದೆ. ಮಹಾನಟಿ ಸೀಸನ್-2ರ ಮೊದಲ Runner Up ಬೆಳಗಾವಿಯ ವರ್ಷಾ ಡಿಗ್ರಜೆ ಆಗಿದ್ದಾರೆ. ಅವರಿಗೆ ಜಾರ್ ಆಯಪ್ ವತಿಯಿಂದ 10 ಲಕ್ಷ ರೂ.ಗಳ ನಗದು ಬಹುಮಾನ ಸಿಕ್ಕಿದೆ. ಮಹಾನಟಿ ಸೀಸನ್-2ರ ಎರಡನೇ ರನ್ನರ್ ಅಪ್ ಮೈಸೂರಿನ ಶ್ರೀಯ ಅಗಮ್ಯ ಅವರಿಗೆ ಸಿಕ್ಕಿದೆ.
ಕಿರುತೆರೆಯಿಂದ ಸಿಲ್ವರ್ ಸ್ಕ್ರೀನ್‌ಗೆ ಪ್ರತಿಭಾನ್ವಿತ ನಟಿಯರಿಗೆ ಅವಕಾಶ ಕೊಡಿಸುವುದು ಮಹಾನಟಿ ರಿಯಾಲಿಟಿ ಶೋನ ಮುಖ್ಯ ಉದ್ದೇಶ. ಅಷ್ಟೇ ಅಲ್ಲದೇ ಬೇರೆ ಬೇರೆ ರೌಂಡ್ಸ್‌ಗಳ ಮೂಲಕ ಈ ನಟಿಯರಿಗೆ ಸಿಲ್ವರ್ ಸ್ಕ್ರೀನ್‌ನಲ್ಲಿ ಹೇಗೆ ಕಾಣಿಸಬೇಕು, ಹೇಗೆ ನಟಿಸಬೇಕು ಎನ್ನುವುದಲ್ಲದೆ ಬೆಳ್ಳಿತೆರೆಯ ಇನ್ನಷ್ಟು ವಿಷಯಗಳ ಬಗ್ಗೆ ಟ್ರೈನ್ ಮಾಡಲಾಗಿದ್ದು ಇದು ಈ ನಟಿಯರಿಗೆ ಮುಂದಿನ ದಿನಗಳಲ್ಲಿ ಸಹಾಯ ಆಗಲಿದೆ.







