ಸಮಗ್ರ ನ್ಯೂಸ್: ಚಿನ್ನದ ಬೆಲೆ ಶೀಘ್ರದಲ್ಲೇ ಕುಸಿಯುವ ಸಾಧ್ಯತೆಯಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಪೇಸ್ 360 ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಮುಖ್ಯ ಜಾಗತಿಕ ತಂತ್ರಜ್ಞಾನಿ ಅಮಿತ್ ಗೋಯಲ್ ಅವರು ಈ ಬೆಲೆಗಳ ಹೆಚ್ಚಳವು ದೀರ್ಘಕಾಲ ಉಳಿಯುವುದಿಲ್ಲ ಎಂಬ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.. ಬೆಲೆ ನಿಗದಿಪಡಿಸುವ ವ್ಯವಸ್ಥೆಯಲ್ಲಿ ಬದಲಾವಣೆಯಾಗಿ ಪ್ರಮುಖ ಕುಸಿತ ಕಾಣಲಿದೆ ಎಂದು ಅವರು ಅಂದಾಜಿಸಿದ್ದಾರೆ.
ಅಮಿತ್ ಗೋಯಲ್ ಅವರ ಪ್ರಕಾರ, ಚಿನ್ನದ ಬೆಲೆ ಶೇಕಡಾ 30 ರಿಂದ 35 ರಷ್ಟು ಇಳಿಕೆಯಾಗುತ್ತದೆ ಎಂದು ಹೇಳಿದ್ದರೆ. ಅಂದರೆ ಗೋಯಲ್ ಪ್ರಕಾರ, ಪ್ರತಿ 10 ಗ್ರಾಂ ಚಿನ್ನಕ್ಕೆ ಸುಮಾರು 77,701 ರೂ. ತಲುಪುವ ಸಾಧ್ಯತೆಯಿದೆ ಎನ್ನಲಾಗಿದೆ. ಅದೇ ರೀತಿ, ಬೆಳ್ಳಿಯ ಬೆಲೆ ಶೇಕಡಾ 50 ರಷ್ಟು ಕಡಿಮೆಯಾಗಿ ಸುಮಾರು 77,450 ತಲುಪಬಹುದು ಎಂದು ತನ್ನ ಅಭಿಪ್ರಾಯ ತಿಳಿಸಿದ್ದಾರೆ. ಅಲ್ಲದೇ ಹೂಡಿಕೆದಾರರು, ಖರೀದಿದಾರರು ಈ ಬೆಲೆ ಇಳಿಕೆ ಬಗ್ಗೆ ಗಮನಿಸುತ್ತಿರುವುದು ಮುಖ್ಯ ಎಂದು ಸಲಹೆ ನೀಡಿದ್ದಾರೆ.
2025 ಪ್ರಾರಂಭ ಆದಾಗಿನಿಂದಲೂ ಚಿನ್ನ ಮತ್ತು ಬೆಳ್ಳಿ ಬೆಲೆ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಮಧ್ಯಮ ವರ್ಗದ ಜನರಿಗೆ ಚಿನ್ನವನ್ನೂ ಖರೀದಿಯೇ ಬೇಡವೆಂಬಂತಾಗಿದೆ.
ಆದರೆ ತಜ್ಞರ ಪ್ರಕಾರ, ಮುಂದಿನ ಕೆಲವು ದಿನಗಳು ಅಥವಾ ವಾರಗಳಲ್ಲಿ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆಯಾಗಬಹುದು ಎನ್ನಲಾಗಿದೆ. ಪ್ರಸ್ತುತ ಬೆಲೆ ಏರಿಕೆಯು ತನ್ನ ಕೊನೆಯ ಹಂತವನ್ನು ತಲುಪಿದೆ ಎಂದು ತಜ್ಞರು ಅಂದಾಜಿಸಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಈ ಬೆಲೆ ಭಾರೀ ಇಳಿಯಾಗುತ್ತೆ ಎಂದು ಹೇಳಿದ್ದಾರೆ. ಅಲ್ಲದೇ 2007, 2008, ಮತ್ತು 2011ರಲ್ಲಿ ಚಿನ್ನದ ದರದಲ್ಲಾದ ಏರಿಳಿತದ ನಂತರ ಚಿನ್ನದ ಬೆಲೆಗಳು ಶೇಕಡಾ 45ರಷ್ಟು ಕುಸಿದ ಇತಿಹಾಸವನ್ನೊಮ್ಮೆ ಇಲ್ಲಿ ಗೋಯಲ್ ನೆನಪಿಸಿಕೊಂಡಿದ್ದಾರೆ.
ಸದ್ಯ ಗೋಯಲ್ ಅವರು, ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಳಿತಗಳು ಹೆಚ್ಚು ಕಾಲ ಉಳಿಯುವುದಿಲ್ಲ, ಕೆಲವೇ ದಿನಗಳಲ್ಲಿ ಇಳಿಕೆಯಾಗುತ್ತೆ ಎಂದು ಹೇಳಿದ್ದಾರೆ. ಬೆಲೆ ನಿಗದಿ ವ್ಯವಸ್ಥೆಯಲ್ಲಿ ಆಗುವ ಬದಲಾವಣೆಗಳೇ ಪ್ರಮುಖ ಬೆಲೆ ಇಳಿಕೆಗೆ ಕಾರಣವಾಗಬಹುದು ಎಂದು ಅವರು ನಿರೀಕ್ಷಿಸಿದ್ದಾರೆ. ಆದ್ದರಿಂದ ಹೂಡಿಕೆದಾರರು ಈ ಕುಸಿತಕ್ಕೆ ಸಿದ್ಧರಾಗಿರಬೇಕು ಎಂದು ಸಲಹೆ ನೀಡಿದ್ದಾರೆ.
ಬೆಲೆ ಏರಿಕೆಗೆ ಕಾರಣವೇನು?
ಹಬ್ಬದ ಸೀಸನ್‌ನಲ್ಲಿ ಭಾರೀ ಬೇಡಿಕೆ, ಕೈಗಾರಿಕಾ ಬೇಡಿಕೆ ಹೆಚ್ಚಳ, ಮತ್ತು ಪೂರೈಕೆಯಲ್ಲಿನ ಕೊರತೆ ಈ ಮೂರು ಪ್ರಮುಖ ಕಾರಣಗಳಿಂದ ಬೆಳ್ಳಿ ಬೆಲೆ ಇಷ್ಟು ಏರಿಕೆಯಾಗಿದೆ ಎಂದು ಹೇಳಿದ್ದಾರೆ. ಆದರೆ ಜಗತ್ತಿನ ಅತಿ ದೊಡ್ಡ ಬೆಳ್ಳಿ ಗ್ರಾಹಕರಲ್ಲಿ ಒಂದಾದ ಭಾರತದಲ್ಲಿ, ದೀಪಾವಳಿ-ಧನತ್ರಯೋದಶಿಯಂತಹ ಶುಭ ಸಂದರ್ಭಗಳಲ್ಲಿ ಬೆಳ್ಳಿ ಖರೀದಿ ಮತ್ತಷ್ಟು ಹೆಚ್ಚಾಗಲಿದೆ ಎಂಬ ನಿರೀಕ್ಷೆಯಿದೆ.
ಸೌರ ವಿದ್ಯುತ್ ಘಟಕಗಳು, ಎಐ ಉದ್ಯಮ ಮತ್ತು ಎಲೆಕ್ಟ್ರಿಕ್ ವಾಹನಗಳಲ್ಲಿ ಬೆಳ್ಳಿಯ ಬಳಕೆ ವೇಗವಾಗಿ ಹೆಚ್ಚಾಗಿದೆ. ಇದು ಬೆಳ್ಳಿಯ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನಲಾಗಿದೆ.







