ನೇಪಾಳದಲ್ಲಿ ಭಾರೀ ಜನಾಕ್ರೋಶ| ಪ್ರಧಾನಿ, ರಾಷ್ಟ್ರಪತಿ ರಾಜೀನಾಮೆ| ಮುಂದುವರಿದ ಹಿಂಸಾಚಾರ

ಸಮಗ್ರ ನ್ಯೂಸ್: ಸಾಮಾಜಿಕ ಜಾಲತಾಣಗಳಲ್ಲಿ ಬ್ಯಾನ್ ಮಾಡಿದ ನೇಪಾಳ ಸರಕಾರದ ವಿರುದ್ದ ಯುವ ಜನತೆ ಪ್ರಾರಂಭಿಸಿದ ಹೋರಾಟ ಇದೀಗ ಇಡೀ ನೇಪಾಳವನ್ನೆ ಅಕ್ಷರಶಃ ಅಶಾಂತಿಗೆ ದೂಡಿದೆ. ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ತೀವ್ರ ಸ್ವರೂಪದ ಹಿಂಸಾಚಾರಕ್ಕೆ ತಿರುಗಿತು.

Ad Widget ... ..

ಪ್ರತಿಭಟನಾಕಾರರು ಅಲ್ಲಿನ ಪ್ರಧಾನಿ ಕೆ.ಪಿ. ಓಲಿಯವರ ನಿವಾಸಕ್ಕೆ ಬೆಂಕಿ ಹಚ್ಚಿದ್ದಾರೆ. ನೇಪಾಳದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳು ಕೇವಲ ಸಾಮಾಜಿಕ ಜಾಲತಾಣಗಳ ನಿಷೇಧದಿಂದ ಮಾತ್ರ ಭುಗಿಲೆದ್ದಿದ್ದಲ್ಲ. ಅಲ್ಲಿನ ಸರ್ಕಾರದ ವಿರುದ್ಧ ಭ್ರಷ್ಟಾಚಾರ, ಸ್ವಜನಪಕ್ಷಪಾತಿ ಧೋರಣೆ, ಅಗಾಧವಾಗಿ ಬೆಳೆದಿರುವ ನಿರುದ್ಯೋಗ ಸಮಸ್ಯೆಗೆ ಸ್ಪಂದಿಸದೇ ಇರುವುದು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಅಲ್ಲಿನ ಯುವಜನತೆ ತೀವ್ರವಾದ ಅಸಮಾಧಾನ ಹೊಂದಿದ್ದರು. ಆ ಎಲ್ಲಾ ಅಸಮಾಧಾನಗಳು ಸ್ಫೋಟಗೊಳ್ಳಲು ಸಾಮಾಜಿಕ ಜಾಲತಾಣಗಳ ನಿಷೇಧ ಕೇವಲ ಒಂದು ಕಿಡಿಯಂತೆ ವರ್ತಿಸಿತು ಅಷ್ಟೆ. ಹಾಗಾಗಿಯೇ, ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧವನ್ನು ಹಿಂದಕ್ಕೆ ಪಡೆದರೂ ಪ್ರತಿಭಟನೆಗಳು ನಿಲ್ಲಲಿಲ್ಲ.

Ad Widget

ಗಲಭೆಯನ್ನು ಹತ್ತಿಕ್ಕುವುದಲ್ಲಿ ವಿಫಲವಾಗಿದ್ದಕ್ಕೆ ಹಾಗೂ ದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಲು ನೇರವಾಗಿ ಕಾರಣವಾಗಿದ್ದಕ್ಕೆ ತೀವ್ರ ಅಸಮಾಧಾನಗೊಂಡ ಪ್ರಧಾನಿ ಕೆಪಿ ಕೋಲಿ ಅವರು ಸೆ. 9ರಂದು ಮದ್ಯಾಹ್ನದ ಹೊತ್ತಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಪ್ರತಿಭಟನೆಯ ಕಾವು ಎಷ್ಟಿತ್ತೆಂದರೆ, ಪ್ರಧಾನಿ ಕೆ.ಪಿ. ಓಲಿಯವರ ಅಧಿಕೃತ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು ಅವರ ನಿವಾಸಕ್ಕೆ ಕಲ್ಲು ತೂರಿ, ಬೆಂಕಿ ಹಚ್ಚಿದರು. ಆನಂತರ, ರಾಷ್ಟ್ರಪತಿ ರಾಮಚಂದ್ರ ಪೌಡೆಲ್ ಅವರ ನಿವಾಸಕ್ಕೆ ಹಾಗೂ ಮಾಜಿ ಪಿಎಂ ಪ್ರಚಂಡ, ಕೆಲವು ಸಚಿವರ ನಿವಾಸಗಳಿಗೆ ಬೆಂಕಿ ಹಚ್ಚಲಾಗಿದೆ. ನೇಪಾಳದ ಅತಿ ದೊಡ್ಡ ರಾಜಕೀಯ ಪಕ್ಷ ನೇಪಾಳಿ ಕಾಂಗ್ರೆಸ್ ಪಾರ್ಟಿ ನಾಯಕ ಶೇರ್ ಬಹಾದೂರ್ ದೇಬಾ, ಗೃಹ ಸಚಿವ ರಮೇಶ್ ಲೇಖಕ್, ವಿದೇಶಾಂಗ ಸಚಿವ ಅರ್ಝು ದೇಬಾ ರಾಣಾ ಅವರ ಖಾಸಗಿ ಶಾಲೆ ಸೇರಿದಂತೆ ಹಲವಾರು ಗಣ್ಯರಿಗೆ ಸೇರಿದ ಆಸ್ತಿಗೆ ಬೆಂಕಿ ಹಚ್ಚಲಾಯಿತು.

ನೇಪಾಳದಲ್ಲಿ ಸೋಷಿಯಲ್‌ ಮೀಡಿಯಾ ಬ್ಯಾನ್‌ ಮಾಡಿರುವ ಕಾರಣ Gen Z ಯುವಕರು ಪ್ರತಿಭಟನೆ ಮಾಡುತ್ತಿದ್ದು, ಇದೀಗ ರಾಷ್ಟ್ರಪತಿ ರಾಮ್ ಚಂದ್ರ ಪೌಡೆಲ್ ಮಂಗಳವಾರ ಅಧಿಕೃತವಾಗಿ ರಾಜೀನಾಮೆ ಕೊಟ್ಟಿದ್ದಾರೆ.

ಪ್ರಧಾನಿ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ನಾಲ್ವರು ಉನ್ನತ ಸಚಿವರು ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ ಅವರ ಸಹಾಯಕ ಪ್ರಕಾಶ್ ಸಿಲ್ವಾಲ್ ಅವರು ರಾಜೀನಾಮೆ ನೀಡಿದ್ದಾರೆ. ತಿಭಟನಾಕಾರರು ಸಂಸತ್ತಿಗೆ ಮೆರವಣಿಗೆ ನಡೆಸಿ, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧವನ್ನು ತೆಗೆದುಹಾಕುವಂತೆ ಒತ್ತಾಯಿಸಿ ಸಂಸತ್ತಿನ ಆವರಣದಲ್ಲಿ ಬೆಂಕಿ ಹಚ್ಚಿದ್ದರು.

Leave a Comment

Your email address will not be published. Required fields are marked *