ಯೂಟ್ಯೂಬರ್ ಸಮೀರ್ ಗೆ ಮಂಗಳೂರು ನ್ಯಾಯಾಲಯದಿಂದ ಜಾಮೀನು ಮಂಜೂರು| ಬಂಧನ ಭೀತಿಯಿಂದ ಪಾರಾದ ಎಐ ವಿಡಿಯೋ ಸ್ಪೆಷಲಿಸ್ಟ್!

ಸಮಗ್ರ ನ್ಯೂಸ್: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಾ ಜಾಮೀನು ಮಂಜೂರುಗೊಳಿಸಿ ಮಂಗಳೂರು ನ್ಯಾಯಾಲಯ ಆದೇಶ ಹೊರಡಿಸಿದೆ.

Ad Widget ... ..

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಜು.12ಕ್ಕೆ ಸುಮೋಟೋ ಪ್ರಕರಣ ದಾಖಲಿಸಿದ್ದರು. ಈ ನಿಟ್ಟಿನಲ್ಲಿ ಸಮೀರ್ ಎಂ.ಡಿ. ಮಂಗಳೂರು ನ್ಯಾಯಾಲಯಕ್ಕೆ ಆ.19ರಂದು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಗುರುವಾರ ಆದೇಶ ಕಾಯ್ದಿರಿಸಿತ್ತು. ಇಂದು ಮತ್ತೆ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.

Ad Widget

ಈ ನಡುವೆ ಸಮೀರ್ ಬಂಧನಕ್ಕಾಗಿ ಬೆಂಗಳೂರಿನ ಬನ್ನೇರುಘಟ್ಟದಲ್ಲಿನ ಆತನ ನಿವಾಸಕ್ಕೆ ಧರ್ಮಸ್ಥಳ ಪೊಲೀಸರು ತೆರಳಿದ್ದರು. ಆದರೆ ಅದಾಗಲೇ ಸಮೀರ್ ತಲೆ‌ಮರೆಸಿಕೊಂಡಿದ್ದಾಗಿ‌ ಹೇಳಲಾಗಿದೆ.

Leave a Comment

Your email address will not be published. Required fields are marked *