ಜಗತ್ತಿನ ಸುರಕ್ಷಿತ ನಗರಗಳ ಪೈಕಿ ಮಂಗಳೂರಿಗೆ 49ನೇ ಸ್ಥಾನ| ದೇಶದಲ್ಲಿ ಮೊದಲ ಸ್ಥಾನ ಪಡೆದ ಕಡಲನಗರಿ

ಸಮಗ್ರ ನ್ಯೂಸ್: ಜಗತ್ತಿನಲ್ಲೇ ಸುರಕ್ಷಿತ ನಗರಗಳ ಪೈಕಿ ದೇಶದಲ್ಲಿ ಮಂಗಳೂರು ನಗರ ಮೊದಲನೇ ಸ್ಥಾನ ಮತ್ತು ವಿಶ್ವದಲ್ಲಿ 49 ನೇ ಸ್ಥಾನ ಪಡೆದಿದೆ. ಸ್ವತಂತ್ರ ಬಳಕೆದಾರರ ಜಾಗತಿಕ ಡಾಟಾಬೇಸ್‌ ಆಗಿರುವ “ನಂಬಿಯೋ’ ತನ್ನ 2025ರ ವರ್ಷದ ಮಧ್ಯ ಭಾಗದ ಪಟ್ಟಿ ಬಿಡುಗಡೆಗೊಳಿಸಿದ್ದು, ಈ ಪಟ್ಟಿಯಲ್ಲಿ ಮಂಗಳೂರು ಅಗ್ರಸ್ಥಾನ ಗಿಟ್ಟಿಸಿಕೊಂಡಿದೆ.

Ad Widget ... ..

ಸುರಕ್ಷಿತ ನಗರಗಳ ವಿಭಾಗದಲ್ಲಿ ವಿಶ್ವದ ಒಟ್ಟು 393 ನಗರದ ಪಟ್ಟಿ ಬಿಡುಗಡೆಗೊಳಿಸಲಾಗಿದ್ದು, ಭಾರತದ 23 ನಗರ ಈ ಪಟ್ಟಿಯಲ್ಲಿದೆ. ಇದರಲ್ಲಿ ಮಂಗಳೂರು ನಗರ ಶೇ.74.2 ಅಂಕದೊಂದಿಗೆ 49ನೇ ಸ್ಥಾನ, ವಡೋದರ 85 ನೇ ಸ್ಥಾನ, ಅಹಮದಾಬಾದ್‌ 93 ನೇ ಸ್ಥಾನ ಪಡೆದಿದೆ.

Ad Widget

Leave a Comment

Your email address will not be published. Required fields are marked *