ಗೃಹಲಕ್ಷ್ಮಿ ಹಣ ಪ್ರತೀ ತಿಂಗಳು ಕೊಡ್ತೀವಿ ಅಂತ ನಾವೆಲ್ಲಿ ಹೇಳಿದೀವಿ? ಉಲ್ಟಾ ಹೊಡೆದ ಡಿಸಿಎಂ ಡಿ.ಕೆ ಶಿವಕುಮಾರ್

ಸಮಗ್ರ ನ್ಯೂಸ್: ನಾವು ಎಲ್ಲಿಯೂ ಗೃಹಲಕ್ಷ್ಮಿ ಹಣವನ್ನು ಪ್ರತಿ ತಿಂಗಳೂ ಕೊಡ್ತೀವಿ ಅಂತ ಹೇಳಿಲ್ಲ ಎಂಬುದಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳುವ ಮೂಲಕ ಉಲ್ಟಾ ಹೊಡೆದಿದ್ದಾರೆ.

Ad Widget ... ..

ಬಳ್ಳಾರಿಯಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶದ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರಿಗೆ ಗೃಹ ಲಕ್ಷ್ಮೀ ಹಣ ಯಾವಾಗ ಬರುತ್ತೆ ಎಂಬುದಾಗಿ ಪತ್ರಕರ್ತರೊಬ್ಬರು ಪ್ರಶ್ನಿಸಿದರು.
ಆಗ ಮಾತನಾಡಿದ ಡಿಸಿಎಂ ನೋಡ್ರಿ ತಿಂಗಳು ತಿಂಗಳು ಹಣ ಕೊಡ್ತೀವಿ ಅಂತ ನಾವು ಹೇಳಿಲ್ಲ. ನೀವು ಟ್ಯಾಕ್ಸ್ ಕಟ್ಟುತ್ತಾ ಇರಬೇಕು. ನಾವು ದುಡ್ಡು ಕೊಡ್ತಾ ಇರಬೇಕು ಎಂದರು.

Ad Widget

ಈಗ ಗುತ್ತಿಗೆ ಕೆಲಸ ಮಾಡುವವರಿಗೆ ನಾಳೆಯೇ ಹಣ ಬಂದು ಬಿಡುತ್ತಾ? ಎರಡು, ಮೂರು ಇಲ್ಲವೇ ಐದು ವರ್ಷ ಆಗುತ್ತೆ ಅಲ್ವ? ಅದೇ ರೀತಿ ಗೃಹಲಕ್ಷ್ಮೀ ಯೋಜನೆಯ ಹಣ ಯಜಮಾನಿಯರಿಗೆ ಬಂದಾಗ ಬರುತ್ತೆ ಅಂತ ಹಾರಿಕೆ ಉತ್ತರ ನೀಡಿದರು.

Leave a Comment

Your email address will not be published. Required fields are marked *