Ad Widget .

ಮದುವೆ ಮನೆಗೆ ಮಾಜಿ ಪ್ರೇಯಸಿ ಎಂಟ್ರಿ- ಯುವತಿಯ ಹೈಡ್ರಾಮಾಗೆ ಕುಟುಂಬಸ್ಥರು ಶಾಕ್

ಸಮಗ್ರ ನ್ಯೂಸ್ : ಯುವಕನೊಬ್ಬನ ಮದುವೆಯ ದಿನವೇ ಆತನ ಮಾಜಿ ಪ್ರಿಯತಮೆ ಮದುವೆ ಮನೆಗೆ ಎಂಟ್ರಿಕೊಟ್ಟು ಶಾಕ್ ನೀಡಿರುವ ಘಟನೆ ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಯುವತಿ ಮದುವೆ ಮನೆಯಲ್ಲಿ ಹೈಡ್ರಾಮಾ ನಡೆಸಿದ್ದು, ವರ ಸೇರಿದಂತೆ ಆತನ ಇಡೀ ಕುಟುಂಸ್ಥರು ಕಂಗಾಲಾಗಿದ್ದಾರೆ.

Ad Widget . Ad Widget .

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅಂದೇ ಮದುವೆಯಾಗಬೇಕಿದ್ದ ಯುವಕ ವರನ ಗೆಟಪ್‌ನಲ್ಲಿ ತಯಾರಾಗಿ ಕುಳಿತಿರುವುದು ಕಂಡು ಬಂದರೆ, ಆತನ ಮಾಜಿ ಪ್ರಿಯತಮೆ ಪಕ್ಕದಲ್ಲೇ ಕುಳಿತುಕೊಂಡು ಆತ ತನಗೆ ಮೋಸ ಮಾಡಿರುವ ಬಗ್ಗೆ ಆತನ ಕುಟುಂಬಸ್ಥರಲ್ಲಿ ದೂರುತ್ತಿರುವುದು ಕಂಡುಬಂದಿದೆ.ವೀಡಿಯೋದಲ್ಲಿ ಯುವತಿ, 2021 ರಲ್ಲಿ ಆತ ತನ್ನನ್ನು ರಹಸ್ಯವಾಗಿ ಮದುವೆಯಾಗಿದ್ದ.

Ad Widget . Ad Widget .

ನಾನು ಹಿಂದೆ ಆತನಿಂದಾಗಿ ಗರ್ಭಿಣಿಯೂ ಆಗಿದ್ದು, ಆತ ಆ ಸಂದರ್ಭ ಗರ್ಭಪಾತಕ್ಕೆ ಒಳಗಾಗುವಂತೆ ಒತ್ತಾಯಿಸಿದ್ದ ಎಂದು ಹೇಳಿಕೊಂಡಿದ್ದಾಳೆ.ವೀಡಿಯೋವನ್ನು ಡಿಸೆಂಬರ್ 11 ರಂದು ಎಕ್ಸ್‌ನಲ್ಲಿ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಯುವತಿ ಮದುವೆ ಮನೆಗೆ ಬಂದು ಹೈಡ್ರಾಮಾ ನಡೆಸಿದಾಗ ವರ ತನ್ನ ಇಡೀ ಕಟುಂಬಸ್ಥರ ಸಮ್ಮುಖದಲ್ಲೇ ಅವಮಾನ ಎದುರಿಸಿದ್ದಾನೆ. ಈ ಘಟನೆಯಿಂದಾಗಿ ಆತನ ಮದುವೆ ಮುರಿದು ಬಿದ್ದಿದ್ದು, ತನಗಾದ ಮೋಸಕ್ಕೆ ಯುವತಿ ಮದುಮಗನಿಗೆ ಪಾಠ ಕಲಿಸಿದ್ದಾಳೆ.

Leave a Comment

Your email address will not be published. Required fields are marked *