Ad Widget .

ವೈದ್ಯೆಗೆ ಮೋಸ ಮಾಡಿದ್ದ ಪೊಲೀಸ್ ಪ್ರಕರಣಕ್ಕೆ ತಿರುವು – ವೈದ್ಯೆ ಅವಳಲ್ಲ ಅವನು!

ಸಮಗ್ರ ನ್ಯೂಸ್: ಬಸವನಗುಡಿ ಪೊಲೀಸ್ ಠಾಣೆಯ ಪಿಎಸ್‌ಐ ರಾಜಕುಮಾ‌ರ್ ಜೋಡಟ್ಟಿ ಅವರು ವೈದ್ಯೆಯೊಬ್ಬರಿಗೆ ಹಣ ವಂಚಿಸಿದ್ದಲ್ಲದೇ ಲೈಂಗಿಕ ಕಿರುಕುಳ ನೀಡಿದ್ದರೆಂದು ಕೇಳಿಬಂದಿದ್ದ ಆರೋಪಕ್ಕೆ ತೀವ್ರ ತಿರುವು ಸಿಕ್ಕಿದೆ. ಯುವಕನೊಬ್ಬ ಮಹಿಳೆಯ ಹೆಸರಿನಲ್ಲಿ ಫೇಸ್ ಬುಕ್ ನಕಲಿ ಖಾತೆ ತೆಗೆದು ಪೊಲೀಸ್ ಪಿಎಸ್‌ಐ ರಾಜ್ ಕುಮಾರ್ ಜೋಡಟ್ಟಿಯವರಿಗೆ ವಂಚಿಸಿರುವ ಸಾಧ್ಯತೆ ಇರುವುದಾಗಿ ಪೊಲೀಸ್ ಆಯುಕ್ತ ದಯಾನಂದ ಅವರು ಮಾಹಿತಿ ನೀಡಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ವೈದ್ಯೆ ಸ್ವಾತಿ ದ್ಯಾಮಕ್ಕನವರ ಹೆಸರಿನಲ್ಲಿ ನಕಲಿ ಖಾತೆ ತೆಗೆದಿದ್ದ ಸಿದ್ದಪ್ಪ ದ್ಯಾಮಕ್ಕನವರ ಎಂಬ ವ್ಯಕ್ತಿ ಪೊಲೀಸ್‌ ಪಿಎಸ್‌ಐ ರಾಜ್ ಕುಮಾರ್ ಅವರನ್ನು ಪರಿಚಯ ಮಾಡಿಕೊಂಡಿದ್ದ. ಬಳಿಕ ಹುಡುಗಿಯ ದನಿಯಲ್ಲಿ ಮಾತನಾಡಿ ಅವರನ್ನು ಮೋಸಗೊಳಿಸಿ 50 ಸಾವಿರ ರೂ. ಪಡೆದಿದ್ದ. ಈ ಹಣವನ್ನು ವಾಪಸ್ ಕೇಳಿದಾಗ ಹಣ ನೀಡದೇ ಖಾತೆಯನ್ನು ಕ್ಲೋಸ್ ಮಾಡಿಕೊಂಡು ಪರಾರಿಯಾಗಿದ್ದ. ಈ ಪ್ರಕರಣವನ್ನು ಪೊಲೀಸರು ಬೆನ್ನು ಹತ್ತುತ್ತಿದ್ದಂತೆಯೇ ಸಿದ್ದಪ್ಪ ಪೊಲೀಸರಿಗೆ ಸ್ವಾತಿ ದ್ಯಾಮಕ್ಕನವರ ತನ್ನ ಸೋದರಿ ಎಂದು ಹೇಳಿಕೊಂಡು ಇ ಮೇಲ್ ಮುಖಾಂತರ ದೂರು ದಾಖಲಿಸಿದ್ದ. ಈತನನ್ನು ವಿಚಾರಣೆಗೆ ಕರೆದಾಗ ಬರಲು ಹಿಂದೇಟು ಹಾಕಿದ್ದ.ಪೊಲೀಸರು ಈಗ ಪ್ರಕರಣದ ಜಾಡು ಹಿಡಿದು ಸಿದ್ದಪ್ಪ ದ್ಯಾಮಕ್ಕನವರ ನನ್ನು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ.

Ad Widget . Ad Widget . Ad Widget .

Leave a Comment

Your email address will not be published. Required fields are marked *