ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿ, 5 ವರ್ಷ ಇರುತ್ತಾರೊ, 3 ವರ್ಷ ಇರುತ್ತಾರೊ ನನಗೆ ಗೊತ್ತಿಲ್ಲ : ಸಚಿವ ಸತೀಶ್‌ ಜಾರಕಿಹೊಳಿ

ಸಮಗ್ರ ನ್ಯೂಸ್:ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿ. ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ. 5 ವರ್ಷ ಇರುತ್ತಾರೊ 3 ವರ್ಷ ಇರುತ್ತಾರೊ ಅದು ನನಗೆ ಗೊತ್ತಿಲ್ಲ ಅದನ್ನು ನೀವು ಹೈಕಮಾಂಡ್ ಬಳಿ ಕೇಳಬೇಕು. ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಅ.08 ರಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಹೇಳಿದರು.

Ad Widget ... ..

ಆದರೆ ಈಗ ಸಿದ್ದರಾಮಯ್ಯನವರೇ ನಮ್ಮ ಸಿಎಂ. ಅದರಲ್ಲಿ ಬೇರೆ ಯಾವುದೇ ಪ್ರಶ್ನೆ ಇಲ್ಲ. ನಾನು ಅವರ ಜೊತೆ ಸಚಿವನಾಗಿ ಕೆಲಸ ಮಾಡುತ್ತೇನೆ. ಸಿಎಂ ಬದಲಾವಣೆ ಪ್ರಶ್ನೆಯೇ ಉದ್ಭವಿಸಿಲ್ಲ. ಅಂತಹ ಯಾವುದೇ ಚರ್ಚೆಗಳೂ ನಡೆದಿಲ್ಲ. ಪಕ್ಷಗಳು, ಮಾಧ್ಯಮಗಳು ಚರ್ಚೆ ಮಾಡುತ್ತಿವೆ. ನಾನು ಈ ವಿಚಾರವನ್ನು ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ. ಅವರವರ ಬೆಂಬಲಿಗರು ಅವರ ನಾಯಕರಿಗೆ ಮುಂದಿನ ಸಿಎಂ ಎಂದು ಜೈಕಾರ ಹಾಕುವುದು ಸಾಮಾನ್ಯ.

Ad Widget

Leave a Comment

Your email address will not be published. Required fields are marked *