ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಫಿಲೋಮಿನಾ ಕಾಲೇಜಿನ ವರ್ಷಾ, ಯಶ್ವಿನ್ ರಾಷ್ಟ್ರಮಟ್ಟಕ್ಕೆ ಆಯ್ಕೆ

ಸಮಗ್ರ ನ್ಯೂಸ್:ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Ad Widget ... ..

ರಾಜ್ಯಅಂತರ್ ಅಥ್ಲೆಟಿಕ್ಸ್‌ ಕ್ರೀಡಾಕೂಟದಲ್ಲಿ ಪ್ರಥಮ ಬಿಕಾಂ ನ ಯಶ್ವಿನ್ ಎತ್ತರ ಜಿಗಿತ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ದ್ವಿತೀಯ ಬಿಸಿಎ ವಿಭಾಗದ ವರ್ಷಾ ಹ್ಯಾಮ‌ರ್ ಎಸೆತದಲ್ಲಿ ಬೆಳ್ಳಿಪದಕಗಳನ್ನು ಪಡೆದು ರಾಂಚಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

Ad Widget

ಪ್ರಥಮ ಬಿಕಾಂನ ಪ್ರಥ್ವಿ ಹ್ಯಾಮರ್ ತ್ರೋದಲ್ಲಿ, ದ್ವಿತೀಯ ಬಿಎಸ್ಸಿಯ ಚೈತ್ರಿಕಾ, ಪ್ರಥಮ ಬಿಬಿಎ ವಿಭಾಗದ ಕೀರ್ತನ್ 400ಮೀ ಓಟದಲ್ಲಿ ಭಾಗವಹಿಸಿರುತ್ತಾರೆ ಎಂದು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಎಲ್ಯಾಸ್ ಪಿಂಟೊ, ರಾಜೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *