ಸುದೀಪ್ ಜೊತೆ ಮತ್ತೆ ಅನೂಪ್… ಕಿಚ್ಚ ಬರ್ತ್ ಡೇಗೆ ಹೊಸ ಸಿನಿಮಾ ಅನೌನ್ಸ್..!

ಸಮಗ್ರ ನ್ಯೂಸ್: ಅನೂಪ್ ಭಂಡಾರಿ ಅವರು ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಆದರೆ ಇದೀಗ ಅವರು ಮತ್ತೊಮ್ಮೆ ಕಿಚ್ಚನ ಜೊತೆ ಕೈ ಜೋಡಿಸಲು ಮುಂದಾಗಿದ್ದಾರೆ. ಹೌದು ಸುದೀಪ್ ಬರ್ತ್ ಡೇ ದಿನ ಹೊಸ ಸಿನಿಮಾ ಘೋಷಣೆ ಆಗಲಿದೆ ಎಂದು ಅನೂಪ್ ಭಂಡಾರಿ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.

Ad Widget ... ..

ಅನೂಪ್ ಭಂಡಾರಿ ಅವರು ‘ರಂಗಿ ತರಂಗ’, ‘ರಾಜರಥ’ ಹೆಸರಿನ ಸಿನಿಮಾ ಮಾಡಿದರು. ಇದಾದ ಬಳಿಕ ಸುದೀಪ್ ಜೊತೆ ‘ವಿಕ್ರಾಂತ್ ರೋಣ’ ಸಿನಿಮಾ ಮಾಡಿದರು. ಈ ಚಿತ್ರ ಯಶಸ್ಸು ಕಂಡ ಬಳಿಕ ಇದೀಗ ಮತ್ತೊಮ್ಮೆ ಅನೂಪ್ ಸುದೀಪ್ ಜೊತೆಯಾಗಿ ಕೆಲಸ ಮಾಡಲು ಮುಂದಾಗಿದ್ದಾರೆ. ಸೆಪ್ಟೆಂಬರ್ 2 ರಂದು ಸುದೀಪ್ ಸಿನಿಮಾ ಬಗ್ಗೆ ಅಧೀಕೃತ ಮಾಹಿತಿ ಸಿಗಲಿದೆ.

Ad Widget

Leave a Comment

Your email address will not be published. Required fields are marked *