ಸಮಗ್ರ ನ್ಯೂಸ್: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ನಟ ದರ್ಶನ ಅವರು ರೌಡಿಶೀಟರ್ ಗಳ ಜೊತೆಗೆ ಕಾಫಿ ಕುಡಿಯುತ್ತಾ ಹಾಗೂ ಸಿಗರೇಟ್ ಸಿಗುತ್ತಾ ಕುಳಿತಿರುವ ಫೋಟೋ ವೈರಲ್ ಆಗಿತ್ತು. ಈ ಕುರಿತಂತೆ ಗೃಹ ಸಚಿವ ಜಿ ಪರಮೇಶ್ವರ್ ಕಾರಾಗೃಹದ ಇಲಾಖೆಯ ಡಿಜಿ ಮಾಲಿನಿ ಕೃಷ್ಣಮೂರ್ತಿ ಅವರೊಂದಿಗೆ ಚರ್ಚೆ ಮಾಡಿದ್ದು ಆಂತರಿಕತೆ ಕರೆ ಮಾಡಿ ಕೊಡಲಿ ವರದಿ ಸಲ್ಲಿಸಿ ಎಂದು ಸಿಟ್ಟಾಗಿದ್ದಾರೆ.
ಈ ಕುರಿತಂತೆ ಬಂದಿಖಾನೆ ಡಿಜಿ ಮಾಲಿನಿ ಕೃಷ್ಣಮೂರ್ತಿ ಜೊತೆ ಗೃಹ ಸಚಿವ ಪರಮೇಶ್ವರ್ ಚರ್ಚೆ ಮಾಡಿದ್ದು, ದರ್ಶನ್ ಅವರು ಜೈಲಲ್ಲಿ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಅವರು ವಿಲ್ಸನ್ ಗಾರ್ಡನ್ ನಾಗ, ಮ್ಯಾನೇಜರ್ ನಾಗರಾಜ್ ಒಟ್ಟಿಗೆ ಸಮಯ ಕಳೆಯುತ್ತಿರೋ ಫೋಟೋನ ಯಾರೋ ವೈರಲ್ ಮಾಡಿದ್ದಾರೆ.
ಕೂಡಲೇ ಗೃಹ ಸಚಿವ ಜಿ ಪರಮೇಶ್ವರ್ ಅವರು ಬಂದಿಖಾನೆಯ ಡಿವಿರಣಿ ಕೃಷ್ಣಮೂರ್ತಿ ಅವರಿಗೆ ದೂರವಾಣಿ ಕರೆ ಮೂಲಕ ಘಟನೆ ಕುರಿತಂತೆ ಚರ್ಚಿಸಿದ್ದಾರೆ.ದರ್ಶನ್ಗೆ ರಾಜಾತಿಥ್ಯದ ಬಗ್ಗೆ ಪರಮೇಶ್ವರ್ ಗರಂ ಆಗಿದ್ದಾರೆ. ಆಂತರಿಕ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ನಟ ದರ್ಶನ ಅವರು ರೌಡಿಶೀಟರ್ ಆದಂತಹ ವಿಲ್ಸನ್ ಗಾರ್ಡನ್ ನಾಗ ಹಾಗೂ ತಮ್ಮ ಮ್ಯಾನೇಜರ್ ಆದಂತಹ ಪ್ರಕರಣದ 11ನೇ ಆರೋಪಿ ನಾಗರಾಜ್ ಹಾಗು ಕುಳ್ಳ ಸೀನಾ ಅವರೊಟ್ಟಿಗೆ ಕುರ್ಚಿಯಲ್ಲಿ ಕುಳಿತುಕೊಂಡು ಕಾಫಿ ಕುಡಿಯುತ್ತಾ ಮತ್ತೊಂದು ಕೈಯಲ್ಲಿ ಸಿಗರೇಟ್ ಸೇದುತ್ತಾ ಕುಳಿತಿದ್ದ ಫೋಟೋ ವೈರಲ್ ಆಗಿತ್ತು. ಅದಾದ ಕೆಲವೇ ಹೊತ್ತಲ್ಲಿ ನಟ ದರ್ಶನ್ ಕಾರಾಗೃಹದಲ್ಲಿ ಇದ್ದುಕೊಂಡೆ ವಿಡಿಯೋ ಕಾಲ್ ಮೂಲಕ ಮಾತಾಡಿರುವ ವಿಡಿಯೋ ಕೂಡ ವೈರಲ್ ಆಗಿತ್ತು.