ಸಹಜ ಸ್ಥಿತಿಗೆ ಮರಳುತ್ತಿರುವ ಬಾಂಗ್ಲಾ/ ಸಾರಿಗೆ ಸೇವೆಗಳು ಪುನರಾರಂಭ

ಸಮಗ್ರ ನ್ಯೂಸ್‌: ಹಿಂಸಾಚಾರದಿಂದ ಕಂಗೆಟ್ಟಿದ್ದ ಬಾಂಗ್ಲಾದೇಶದಲ್ಲಿ ಇದೀಗ ಮೆಟ್ರೊ, ಬಸ್, ಟ್ಯಾಕ್ಸಿಗಳಂತಹ ಸೇವೆಗಳು ಪುನರಾರಂಭಗೊಂಡಿದ್ದು ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ದೇಶದಾದ್ಯಂತ ವ್ಯಾಪಾರ- ವಹಿವಾಟುಗಳು ಪುನಾರಂಭಗೊಳ್ಳುತ್ತಿವೆ. ರಾಜಧಾನಿ ಢಾಕಾದಲ್ಲಿ ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಿಲ್ಲವಾದರೂ ನಿಧಾನವಾಗಿ ಸುಧಾರಿಸುತ್ತಿದೆ.

. Ad Widget . Ad Widget

ಸರ್ಕಾರಿ ನೇಮಕಾತಿಯಲ್ಲಿನ ಮೀಸಲಾತಿ ವಿರೋಧಿಸಿ ಸರ್ಕಾರದ ವಿರುದ್ಧ ಬಾಂಗ್ಲಾದಾದ್ಯಂತ ಯುವಕರು ಮತ್ತು ವಿದ್ಯಾರ್ಥಿಗಳು ಪ್ರಾರಂಭಿಸಿದ ಪ್ರತಿಭಟನೆಯು ತೀವ್ರ ಹಿಂಸಾಚಾರಕ್ಕೆ ತಿರುಗಿತು. ಇದರಿಂದಾಗಿ ಆ.5ರಂದು ಮಾಜಿ ಪ್ರಧಾನಿ ಶೇಕ್ ಹಸೀನಾ ಅವರು ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನಗೈದರು. ನಂತರ ಆ.8ರಂದು ದೇಶದಲ್ಲಿ ಮಧ್ಯಂತರ ಸರ್ಕಾರ ರಚನೆಯಾಯಿತು. ಹಿಂಸಾಚಾರದಲ್ಲಿ 560ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

. Ad Widget . . Ad Widget . Ad Widget

Leave a Comment

Your email address will not be published. Required fields are marked *