ಮಡಿಕೇರಿ: ಬೆಳ್ಳಂಬೆಳಗೆ ಕಾಡಾನೆ ದಾಳಿ| ವಾಟರ್‌ ಮ್ಯಾನ್ ಪ್ರಾಣಾಪಾಯದಿಂದ ಪಾರು

ಸಮಗ್ರ ನ್ಯೂಸ್ : ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆ‌ ಅಂದಗೋವೆ ಪೈಸಾರಿ ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯ ನೀರು ಗಂಟಿ (ವಾಟರ್‌ ಮ್ಯಾನ್) ಹುಸೇನ್ ಎಂಬಾತನ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ಆ.3 ರಂದು ನಡೆದಿದೆ.

Ad Widget ... ..

ಮುಂಜಾನೆ 6 ಗಂಟೆ ಸಮಯದಲ್ಲಿ ಕಾಡಾನೆ ದಾಳಿ ನಡೆಸಿದೆ. ಹುಸೇನ್ ಅವರ ಕೈ ಹಾಗೂ ಕಾಲಿನ ಭಾಗಗಳಿಗೆ ಸಣ್ಣ ಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Ad Widget

Leave a Comment

Your email address will not be published. Required fields are marked *