ವಯನಾಡಿಗೆ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಭೇಟಿ

ಸಮಗ್ರ ನ್ಯೂಸ್: ಗುಡ್ಡ ಕುಸಿತದಿಂದಾಗಿ ನಿರ್ನಾಮವಾಗಿರುವ ವಯನಾಡಿಗೆ ಇಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಭೇಟಿ ನೀಡಿದ್ದಾರೆ. ಗುಡ್ಡ ಕುಸಿತದಿಂದಾಗಿ ವಯನಾಡಿನಲ್ಲಿ ಸಾವನ್ನಪ್ಪಿದವರ ಸಂಖ್ಯೆ 300 ಕ್ಕೆ ತಲುಪಿದೆ. ಇನ್ನೂ ನೂರಾರು ಜನ ನಾಪತ್ತೆಯಾಗಿದ್ದು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

Ad Widget ... ..

ಗುಡ್ಡ ಕುಸಿತ ಸಂಭವಿಸಿದ ಸ್ಥಳ ಈಗ ಕೆಸರು ಗೆದ್ದೆಯಂತಾಗಿದೆ. ಮಣ್ಣು ಮತ್ತು ನೀರು ಸೇರಿಕೊಂಡು ನಡೆಯಲೂ ಕಷ್ಟವಾಗುವಂತಹ ಪರಿಸ್ಥಿತಿ ಎದುರಾಗಿದೆ. ಪರಿಹಾರ ಕಾರ್ಯ ಮುಂದುವರಿಸಲು ರಕ್ಷಣಾ ಸಿಬ್ಬಂದಿಗಳು ತಾತ್ಕಾಲಿಕವಾಗಿ ಸೇತುವೆ, ಡೇರೆಗಳನ್ನು ನಿರ್ಮಿಸಿಕೊಂಡಿದ್ದಾರೆ.

Ad Widget

ಗಮ್ ಬೂಟ್ ಮತ್ತು ಮಳೆಯಿಂದ ರಕ್ಷಣೆಗಾಗಿ ರೈನ್ ಕೋಟ್ ಧರಿಸಿಕೊಂಡ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ದುರಂತ ಸಂಭವಿಸಿದ ಸ್ಥಳದಲ್ಲಿ ಓಡಾಡಿ ಸಿಬ್ಬಂದಿಗಳಿಂದ ಮಾಹಿತಿ ಪಡೆದರು. ಈ ವೇಳೆ ಅಲ್ಲಿದ್ದ ಸಂತ್ರಸ್ತರು ರಾಹುಲ್ ಗಾಂಧಿ ಬಳಿ ತಮ್ಮ ಕಷ್ಟ ತೋಡಿಕೊಂಡರು. ಸುರಿಯುವ ಮಳೆಯ ನಡುವೆಯೂ ರಾಹುಲ್ ಸ್ಥಳ ಪರಿಶೀಲನೆ ನಡೆಸಿದರು. ಚೂರ್ಲಮಲದ ದುರಂತ ಸ್ಥಳ, ಮೇಪ್ಪಾಡಿಯ ಸಂತ್ರಸ್ತರ ಕೇಂದ್ರಗಳಿಗೂ ರಾಹುಲ್ ಭೇಟಿ ನೀಡಿದರು.

Leave a Comment

Your email address will not be published. Required fields are marked *