ಶಿರಾಡಿ‌ ಘಾಟ್ ನಲ್ಲಿ ಮತ್ತೆ ಭೂಕುಸಿತ| ಮಣ್ಣಿನಡಿ ಹೂತುಹೋದ ವಾಹನಗಳು| ರಸ್ತೆ‌ ಸಂಚಾರ ಸ್ಥಗಿತ

ಸಮಗ್ರ ನ್ಯೂಸ್: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡತಪ್ಲುನಲ್ಲಿ ಗುಡ್ಡ ಕುಸಿದು ಮಣ್ಣಿನಡಿ ಕೆಲವು ವಾಹನಗಳು ಸಿಲುಕಿವೆ.‌ ಗುಡ್ಡ ಕುಸಿತದ ರಭಸಕ್ಕೆ ಕಂಟೇನರ್ ಪಲ್ಟಿಯಾಗಿದ್ದು, ಮತ್ತೊಂದು ಬೃಹತ್ ಕಂಟೇನರ್ ಮಣ್ಣಿನಡಿ ಸಿಲುಕಿದೆ.

Ad Widget ... ..

ಪಲ್ಟಿಯಾಗಿರುವ ಕಂಟೇನರ್‌ನಲ್ಲಿ ಚಾಲಕ ಸಿಲುಕಿದ್ದಾನೆ. ಸಂಜೆ ಮಳೆ ಹೆಚ್ಚಾಗಿರುವುದರಿಂದ ಗುಡ್ಡ ಕುಸಿದಿದೆ. ಶಿರಾಡಿಘಾಟ್ ರಸ್ತೆಯಲ್ಲಿ ಮತ್ತೆ ವಾಹನ ಸಂಚಾರ ಬಂದ್ ಆಗಿದೆ.

Ad Widget

Leave a Comment

Your email address will not be published. Required fields are marked *