ಸುಳ್ಯ: ತಾಯಿ- ಮಗು ‘ಕೆರೆಗೆ ಹಾರ’

ಸುಳ್ಯ: ಕೆರೆಗೆ ಕಾಲು ಜಾರಿ ಬಿದ್ದ ಮಗುವನ್ನು ರಕ್ಷಿಸಲು ಕೆರೆಗೆ ಹಾರಿದ ತಾಯಿ ಇಬ್ಬರೂ ಮುಳುಗಿ ಬಲಿಯಾದ ಘಟನೆ ತಾಲೂಕಿನ ನೆಲ್ಲೂರು ಕೇಮ್ರಾಜೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಾಪಲಕಜೆಯ. ಸಂಗೀತಾ ಮತ್ತು ಆಕೆಯ ಮಗು‌ ಮೃತ ದುರ್ದೈವಿಗಳು.

Ad Widget ... ..

Ad Widget

ತೋಟದಲ್ಲಿನ ಕೆರೆಯ ಬಳಿ ಮಗು ಕಾಲುಜಾರಿ ಬಿದ್ದಾಗ ಅದನ್ನು ರಕ್ಷಿಸಲು ಸಂಗೀತಾ ಅವರು ಕೆರೆಗೆ ಹಾರಿದ್ದಾರೆ. ಆದರೆ ಈಜು ಭಾರದ ಅವರು ಮಗುವನ್ನು ರಕ್ಷಿಸಲೂ ಆಗದೆ ಇತ್ತ ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳಲಾಗದೇ ಮೃತಪಟ್ಟಿದ್ದಾರೆ.

ಸಂಗಿತಾ ಅವರ ಮೃತದೇಹ ಮೇಲೆತ್ತಲಾಗಿದ್ದು ಮಗುವಿನ ಮೃತದೇಹವನ್ನು ತೆಗೆಯುವ ಪ್ರಯತ್ನ ನಡೆಯುತ್ತಿದೆ.
ಸುಳ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *