ಮಡಿಕೇರಿ: ʼತುರ್ತಾಗಿ ಒಂದು ಅಪಘಾತ ಮಾಡಿʼ ಸೂಚನಾ ಫಲಕ ವೈರಲ್

ಸಮಗ್ರ ನ್ಯೂಸ್: ಹೈವೆಗಳಲ್ಲಿ, ತಿರುವುಗಳಲ್ಲಿ ನಾವು ಅಪಘಾತ ವಲಯ, ಅವಸರವೇ ಅಪಘಾತಕ್ಕೆ ಕಾರಣ ಎಂಬ ಸೂಚನಾ ಫಲಕ ಅಳವಡಿಸಿರುವುದನ್ನು ನಾವು ನೋಡಿದ್ದೇವೆ. ಅದೇ ರೀತಿ ಕರ್ನಾಟಕದ ಕೊಡಗಿನ ಬಳಿಯ ಹೆದ್ದಾರಿಯಲ್ಲಿ ಅಳವಡಿಸಲಾಗಿರುವ ತುರ್ತು ಸೂಚನಾ ಫಲಕವೊಂದು ಇದೀಗ ಅಂತರ್ಜಾಲದಲ್ಲಿ ಫುಲ್ ವೈರಲ್ ಆಗಿದೆ.

Ad Widget ... ..

ಹೌದು ಅಂತದೇನಿದೆ ಆ ನಾಮಫಲಕದಲ್ಲಿ ಅಂತಿರಾ ಈ ಫೋಟೋ ನೋಡಿ ಅದರಲ್ಲಿ “ಅವಸರವೇ ಅಪಘಾತಕ್ಕೆ ಕಾರಣ” ಹಾಗೂ “Urgent Make An Accident” ಎಂದು ಬರೆಯಲಾಗಿದೆ. ಈ ಇಂಗ್ಲಿಷ್‌ ವಾಕ್ಯದ ಕನ್ನಡ ಅರ್ಥ ʼತುರ್ತಾಗಿ ಒಂದು ಅಪಘಾತ ಮಾಡಿʼ ಎಂದಾಗುತ್ತದೆ! ತಪ್ಪಿರುವ ಈ ಸೂಚನಾ ಫಲಕವನ್ನು ವಾಹನ ಚಾಲಕರು ಅಕ್ಷರಶಃ ಪಾಲಿಸಲು ಹೋದರೆ ಅನರ್ಥವೇ ಆಗುತ್ತದೆ! ಕನ್ನಡದಿಂದ ಇಂಗ್ಲಿಷ್‌ಗೆ ತಪ್ಪಾಗಿ ಅನುವಾದ ಮಾಡಿರುವುದರಿಂದ ಈ ಅವಾಂತರ ಆಗಿದೆ. ಆದರೆ ಈ ದೃಶ್ಯ ಕಂಡು ಬಂದಿದ್ದು ಮಡಿಕೇರಿಯ ಸಂಪಾಜೆ ಬಳಿ. ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಜನರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡುವ ಮೂಲಕ ನಗುತ್ತಿದ್ದಾರೆ.

Ad Widget

Leave a Comment

Your email address will not be published. Required fields are marked *