ಕೆಎಸ್‌ಆರ್‌ಟಿಸಿ ಬಸ್‌ ಕಿಟಕಿಯಲ್ಲಿ ಮಹಿಳೆ ತಲೆ ಲಾಕ್..!ಕೆಲ ಕಾಲ ಮಹಿಳೆ ಪರದಾಟ

ಸಮಗ್ರ ನ್ಯೂಸ್: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ತಲೆ ಲಾಕ್‌ ಆದ ಘಟನೆ ನಡೆದಿದೆ. ಕಿಟಿಕಿಯಿಂದ ತಲೆಹೊರ ಹಾಕಿದ್ದಾರೆ. ಆಗ ತಲೆ ಸಿಕ್ಕಿಸಿಕೊಂಡಿದೆ. ಇದರ ಪರಿಣಾಮ ಮಹಿಳೆ ಕೆಲಕಾಲ ಪರದಾಡುವಂತಾಯಿತು.

Ad Widget ... ..

ಈ ಮಹಿಳೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು ಆಗ ಉಗುಳಲು ಬಸ್‌ನ ಕಿಟಿಕಿಯ ಸಣ್ಣ ಸಂದಿಯೊಳಗೆ ತಲೆಯನ್ನು ಹೊರಹಾಕಿದ್ದರು. ಹೀಗೆ ಹೊರ ಹಾಕಿದ ತಲೆಯು ವಾಪಸ್‌ ಹಿಂದಕ್ಕೆ ಬಾರದೇ ಅಲ್ಲೆ ಲಾಕ್‌ ಆಗಿತ್ತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಅಲ್ಲೆ ತಲೆ ಲಾಕ್ ಆಗಿತ್ತು. ಮಹಿಳೆಯ ಪರದಾಟ ಹಾಗೂ ಕೂಗಾಟ ಕಂಡು ಸಹ ಪ್ರಯಾಣಿಕರು ಸಹಾಯಕ್ಕೆ ಧಾವಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಮಹಿಳೆ ತಲೆ ಲಾಕ್‌ ಆಗಿರುವುದು ಗಮನಕ್ಕೆ ಬಂದಾಕ್ಷಣ ಕೆಎಸ್‌ಆರ್‌ಟಿಸಿ ಬಸ್ಸಿನ ಚಾಲಕ ಹಾಗೂ ನಿರ್ವಾಹಕರು ಬಸ್ ನಿಲ್ಲಿಸಿದ್ದಾರೆ. ಬಳಿಕ 15 ನಿಮಿಷಗಳ ಕಾರ್ಯಾಚರಣೆ ಮಾಡಿ, ಜಾಗರೂಕತೆಯಿಂದ ಮಹಿಳೆಯ ತಲೆಯನ್ನು ಕಿಟಿಕಿಯಿಂದ ಬಿಡಿಸಿ, ರಕ್ಷಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Ad Widget

Leave a Comment

Your email address will not be published. Required fields are marked *