ಪೆನ್‌ಡ್ರೈವ್‌ ಪ್ರಕರಣ: ನಾಳೆ ಬೆಂಗಳೂರಿಗೆ ಪ್ರಜ್ವಲ್ ರೇವಣ್ಣ?

ಸಮಗ್ರ ನ್ಯೂಸ್: ಹಾಸನ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡು ವಿದೇಶಕ್ಕೆ ತೆರಳಿರುವ ಪ್ರಜ್ವಲ್ ರೇವಣ್ಣ ಯಾವಾಗ ಭಾರತಕ್ಕೆ ಬರುತ್ತಾರೆ ಎಂದು ಅಧಿಕಾರಿಗಳು ಕಾಯುತ್ತಿದ್ದಾರೆ. ಅಪ್ಪನಿಗೆ ಜಾಮೀನು ಸಿಕ್ಕಿದ ಮೇಲೆ ಬರಬಹುದು ಎಂಬ ಮಾತುಗಳು ಹೊರಬಿದ್ದಿತು. ಅದರಂತೆ ಈಗ ಬಿಗ್ ಅಪ್ಡೇಟ್ ಒಂದು ಲಭ್ಯವಾಗಿದೆ.

Ad Widget ... ..

ಜರ್ಮನಿಯಲ್ಲಿರುವ ಪ್ರಜ್ವಲ್‌, ಲುಫ್ತಾನ್ಸಾ ಏರ್‌ಲೈನ್ಸ್‌ ಮೂಲಕ ಭಾರತಕ್ಕೆ ಹಿಂತಿರುಗಲಿದ್ದಾರೆ. ಜರ್ಮನಿಯಲ್ಲಿ ನಾಳೆ (ಮೇ 15) ಬೆಳಗ್ಗೆ 11.20 ರಿಂದ 11.50ರೊಳಗೆ ಬೋರ್ಡಿಂಗ್‌ ಆಗಲಿದ್ದು, ಅವರಿಗಾಗಿ ಸೀಟ್‌ ನಂಬರ್‌ 6ಜಿ ಬುಕ್‌ ಮಾಡಲಾಗಿದೆ. LH0764 ವಿಮಾನದಲ್ಲಿ ಸಂಸದ ಆಗಮಿಸಲಿದ್ದಾರೆ. ಹರಿಯಾಣದ ಅಕಲ್‌ ಟ್ರಾವೆಲ್ಸ್‌ನಿಂದ ಪ್ರಜ್ವಲ್‌ಗೆ ಟಿಕೆಟ್‌ ಬುಕ್‌ ಮಾಡಲಾಗಿದೆ. ಜರ್ಮನಿಯ ಮ್ಯೂನಿಚ್‌ನಲ್ಲಿ ಬೆಳಗ್ಗೆ 12.05ಕ್ಕೆ ಫ್ಲೈಟ್‌ ಟೇಕಾಫ್‌ ಆಗಲಿದ್ದು, ರಾತ್ರಿ 12.30ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಈ ಮೂಲಕ ನಾಳೆ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ.

Ad Widget

Leave a Comment

Your email address will not be published. Required fields are marked *