Ad Widget .

ಮಲೆನಾಡು, ಘಟ್ಟ ಪ್ರದೇಶದ ಹಲವೆಡೆ ಮಳೆ| ಮಡಿಕೇರಿ, ಸುಳ್ಯ, ಮೈಸೂರಲ್ಲಿ ವರುಣ ಸಿಂಚನ

ಸಮಗ್ರ ನ್ಯೂಸ್: ಕರಾವಳಿ ಜಿಲ್ಲೆ‌ ದ.ಕನ್ನಡದ ಅವಿಭಜಿತ ಸುಳ್ಯ ತಾಲೂಕು ಹಾಗೂ ಮಲೆನಾಡಿನ ‌ಕೆಲ ಜಿಲ್ಲೆಗಳಲ್ಲಿ ಮಳೆಯ ಸಿಂಚನವಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಶುಕ್ರವಾರ(ಮೇ4) ಸಂಜೆ ವೇಳೆಗೆ ಕುಕ್ಕೆ ಸುಬ್ರಹ್ಮಣ್ಯ, ಸುಳ್ಯ, ಸಂಪಾಜೆ, ಮಡಿಕೇರಿ ಜಿಲ್ಲೆಯ ಕೆಲವಡೆ, ಮೈಸೂರು ನಗರ, ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗಿದೆ. ಮಳೆಯ ಜೊತೆಗೆ ಗುಡುಗು, ಸಿಡಿಲಿನ ಅಬ್ಬರವೂ ಜೋರಾಗಿತ್ತು.

Ad Widget . Ad Widget . Ad Widget .

ಮಳೆಯಿಂದಾಗಿ ರಣಬಿಸಿಲಿನಿಂದ ತತ್ತರಿಸಿದ್ದ ಜನತೆ ಕೊಂಚ ನಿರಾಳವಾಗಿದ್ದಾರೆ. ಮುಂದಿನ ಕೆಲ ದಿನ ಮಲೆನಾಡು ಹಾಗೂ ದ. ಒಳನಾಡಿನ ಹಲವಡೆ ಮಳೆಯಾಗುವ ಮುನ್ಸೂಚನೆ ಇದೆ.

ಕೊಡಗು, ದ.ಕನ್ನಡ, ಮೈಸೂರು, ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಪೂರ್ವ ಮುಂಗಾರು ಮಾರುತಗಳು ಕಳೆಗಟ್ಟುತ್ತಿದ್ದು, ಮಳೆ ನಿರೀಕ್ಷಿಸಲಲಬಹುದಾಗಿದೆ.

Leave a Comment

Your email address will not be published. Required fields are marked *