Ad Widget .

ಪಾಕ್‍ನಲ್ಲಿ ತೀವ್ರ ಆರ್ಥಿಕ ಮುಗ್ಗಟ್ಟು/ ಒಂದು ಕೇಜಿ ಗೋಧಿ ಹಿಟ್ಟಿನ ಬೆಲೆ ರೂ. 800

ಸಮಗ್ರ ನ್ಯೂಸ್: ಪಾಕಿಸ್ತಾನ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ಇದೀಗ 1 ಕೇಜಿ ಗೋಧಿ ಹಿಟ್ಟಿನ ಬೆಲೆ 800 ರು. ದಾಟಿದ್ದು, ಒಂದು ರೊಟ್ಟಿ 25 ರು.ಗಿಂತ ಕಮ್ಮಿಗೆ ಸಿಗುತ್ತಿಲ್ಲ. ಅಲ್ಲದೆ ಬಾಳೆಹಣ್ಣು ಬೆಲೆ ಕೂಡ 200 ರು. ಗಡಿ ದಾಟಿದೆ. ಹೀಗಾಗಿ ಬೆಲೆ ನಿಯಂತ್ರಣ ಹಾಗೂ ಆಹಾರ ಪೆÇೀಲು ನಿಯಂತ್ರಣ ಉದ್ದೇಶದಿಂದ ಮದುವೆ ತಿನಿಸು ಹಾಗೂ ಭಕ್ಷ್ಯಗಳಿಗೆ ಲಗಾಮು ಹಾಕಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಇದರ ಭಾಗವಾಗಿ ವಿಶೇಷವಾಗಿ ಮದುವೆಗಳು ಮತ್ತು ಸಮಾರಂಭಗಳಲ್ಲಿ. ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರ್ಯಮ್ ನವಾಜ್ ಅವರು ಒಂದು ಭಕ್ಷ್ಯ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ಧರಿಸಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಈ ನೀತಿಯನ್ನು 2016 ರಲ್ಲಿ ಮೊದಲು ಜಾರಿಗೆ ತರಲಾಗಿದ್ದರೂ, ಜನರು ಅದನ್ನು ಅನುಸರಿಸಲಿಲ್ಲ. ಇದೀಗ ಈ ನೀತಿಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಒಂದು ಭಕ್ಷ್ಯ ನೀತಿಯ ಪ್ರಕಾರ, ಮದುವೆಯ ಪಾರ್ಟಿಗಳಲ್ಲಿ ಒಂದಕ್ಕಿಂತ ಹೆಚ್ಚು ಭಕ್ಷ್ಯಗಳನ್ನು ಅನುಮತಿಸಲಾಗುವುದಿಲ್ಲ. ಇದರರ್ಥ, ಆಹಾರ ಮೆನುವಿನಲ್ಲಿ ಕೇವಲ ತಲಾ ಒಂದು ತರಕಾರಿ, ಅನ್ನ, ರೊಟ್ಟಿ, ದಾಲ್, ಸಲಾಡ್, ತಂಪು ಪಾನೀಯ ಮತ್ತು ಒಂದು ಸಿಹಿತಿಂಡಿಯನ್ನು ನೀಡಲು ಅನುಮತಿಸಲಾಗಿದೆ. ಇದನ್ನು ಉಲ್ಲಂಘಿಸಿದವರ ಮೇಲೆ ಸರ್ಕಾರಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಮತ್ತು ದಂಡ ವಿಧಿಸುತ್ತಿದ್ದಾರೆ.

Ad Widget . Ad Widget . Ad Widget .

ಪಾಕಿಸ್ತಾನವು ಪ್ರಸ್ತುತ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಬೇಲ್‍ಔಟ್ ಪ್ಯಾಕೇಜ್‍ಗಳಲ್ಲಿ ಉಳಿದುಕೊಂಡಿದೆ ಮತ್ತು ಇತ್ತೀಚೆಗೆ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ವಿತ್ತೀಯ ಸಹಾಯವನ್ನು ಪಡೆಯಲು ಸೌದಿ ಅರೇಬಿಯಾಕ್ಕೆ ಹೋದರೂ ಯಶಸ್ವಿಯಾಗಲಿಲ್ಲ. ಪಾಕಿಸ್ತಾನದಲ್ಲಿ ಹಣದುಬ್ಬರ ಈಗಾಗಲೇ ಶೇ.25 ಇದ್ದು ಏಷ್ಯಾದಲ್ಲೇ ಗರಿಷ್ಠವಾಗಿದೆ.

Leave a Comment

Your email address will not be published. Required fields are marked *