ಸಮಗ್ರ ಉದ್ಯೋಗ: ಮೈಕ್ರೋವೇವ್ ಟ್ಯೂಬ್ ರಿಸರ್ಚ್ & ಡೆವಲಪ್ಮೆಂಟ್ ಸೆಂಟರ್, ಡಿಫೆನ್ಸ್ ರಿಸರ್ಚ್ & ಡೆವಲಪ್ಮೆಂಟ್ ಆರ್ಗನೈಜೇಶನ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಜೂನಿಯರ್ ರಿಸರ್ಚ್ ಫೆಲೋ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 30, 2024 ಬೆಂಗಳೂರಿನಲ್ಲಿ ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲೇ ಪೋಸ್ಟಿಂಗ್ ನೀಡಲಾಗುತ್ತದೆ. ಸರ್ಕಾರಿ ಕೆಲಸ ಹುಡುಕ್ತಿದ್ರೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಶೈಕ್ಷಣಿಕ ಅರ್ಹತೆ:
ಮೈಕ್ರೋವೇವ್ ಟ್ಯೂಬ್ ರಿಸರ್ಚ್ & ಡೆವಲಪ್ಮೆಂಟ್ ಸೆಂಟರ್, ಡಿಫೆನ್ಸ್ ರಿಸರ್ಚ್ & ಡೆವಲಪ್ಮೆಂಟ್ ಆರ್ಗನೈಜೇಶನ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ECEಯಲ್ಲಿ ಬಿಇ/ಬಿ.ಟೆಕ್, ಎಂಇ/ಎಂ.ಟೆಕ್, ಎಂ.ಎಸ್ಸಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಮೈಕ್ರೋವೇವ್ ಟ್ಯೂಬ್ ರಿಸರ್ಚ್ & ಡೆವಲಪ್ಮೆಂಟ್ ಸೆಂಟರ್, ಡಿಫೆನ್ಸ್ ರಿಸರ್ಚ್ & ಡೆವಲಪ್ಮೆಂಟ್ ಆರ್ಗನೈಜೇಶನ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 28 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
SC/ST/PH ಅಭ್ಯರ್ಥಿಗಳು: 05 ವರ್ಷಗಳು
OBC ಅಭ್ಯರ್ಥಿಗಳು: 03 ವರ್ಷಗಳು
ವೇತನ/ಸ್ಟೈಪೆಂಡ್
ಮಾಸಿಕ ₹ 37,000
ಉದ್ಯೋಗದ ಸ್ಥಳ:
ಬೆಂಗಳೂರು
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಸಂದರ್ಶನ ನಡೆಯುವ ಸ್ಥಳ:
MTRDC ರಿಸೆಪ್ಶನ್
ಭಾರತ್ ಎಲೆಕ್ಟ್ರಾನಿಕ್ಸ್ ನಾರ್ತ್ ಗೇಟ್ ಹತ್ತಿರ
ಜಾಲಹಳ್ಳಿ ಪೋಸ್ಟ್
ಬೆಂಗಳೂರು-560013