ಮಂಗಳೂರಿನಲ್ಲಿ ಮೊದಲ ಬಾರಿ ಮೋದಿ ರೋಡ್ ಶೋ: ಖಾಕಿ ಹೈ ಅಲರ್ಟ್

ಸಮಗ್ರ ನ್ಯೂಸ್‌ : ಪ್ರಧಾನಿ ಮೋದಿ ಆಗಮನ ಹಿನ್ನಲೆ ಮಂಗಳೂರು ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದೆ. ಏರ್ ಪೋರ್ಟ್ ನಿಂದ ರೋಡ್ ಶೋ ಮುಕ್ತಾಯವಾಗುವ ಪ್ರದೇಶದವರೆ, ಹಾಗೆಯೇ ಲೇಡಿಹಿಲ್ ವರೆಗೂ ಬಿಗಿ ಭದ್ರತೆ ವಹಿಸಿಕೊಂಡಿದೆ.

Ad Widget ... ..

ಸುಮಾರು 2500 ಸಾವಿರ ಪೊಲೀಸ್ ಸಿಬ್ಬಂದಿಯ ನಿಯೋಜನೆ ಮಾಡಿಕೊಂಡಿದೆ. 10 ಜನ ಎಸ್ಪಿ ಹಾಗು ಹೆಚ್ಚುವರಿ ಎಸ್ಪಿ ರಾಂಕ್ ಅಧಿಕಾರಿಗಳು, 250 ಡಿವೈಎಸ್ಪಿ ಮತ್ತು ಪಿಎಸ್ ಐ ರಾಂಕ್ ಅಧಿಕಾರಿಗಳ ನಿಯೋಜನೆ ಮಾಡಿದೆ.

Ad Widget

ವಾಹನ ಸಂಚಾರ ,ಪಾರ್ಕಿಂಗ್ ಸೇರಿದಂತೆ ಸಂಚಾರ ವ್ಯವಸ್ಥೆಗೆ ಬದಲಾವಣೆ ಮಾಡಲಾಗಿದೆ. ರೋಡ್ ಶೊ ಆರಂಭವಾಗುವ ಎರಡು ಗಂಟೆ ಮುನ್ನ ನಿಬಂಧನೆಗಳು ಜಾರಿಯಾಗಲಿದೆ. ರೋಡ್ ಶೊ ಸುತ್ತಮುತ್ತದ ಪ್ರದೇಶದಲ್ಲಿ ವಾಹನ ಸಂಚಾರ ನಿಷೇಧಿಸಲಾಗುತ್ತದೆ. 3 ದಿನದಿಂದ ಭದ್ರತೆಯ ದೃಷ್ಟಿಕೋನದಲ್ಲಿ ನಿರಂತರ ಡ್ರೋನ್ ಸರ್ವೇ ಮಾಡಲಾಗ್ತಿದೆ ಎಂದು ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿಕೆ ನೀಡಿದ್ದಾರೆ

Leave a Comment

Your email address will not be published. Required fields are marked *