ಚೀನಿವಾರ ಮಾರುಕಟ್ಟೆಯಲ್ಲಿ ಭಾರೀ ಕುಸಿತ| ಚಿನ್ನ 3380, ಬೆಳ್ಳಿ 10ಸಾವಿರ ಇಳಿಕೆ

ಸಮಗ್ರ ನ್ಯೂಸ್: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದೆ. ಅ.31ರಂದು ಶನಿವಾರ 2ನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಒಂದೇ ದಿನಕ್ಕೆ 10 ಗ್ರಾಂ ಶುದ್ದ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 3380ರೂ ಕುಸಿತವಾಗಿದೆ. ಈ ಮೂಲಕ ಚಿನ್ನ ಬೆಲೆ 1.30ಲಕ್ಷಕ್ಕೆ ಕುಸಿತವಾಗಿದೆ.

. Ad Widget . Ad Widget . Ad Widget

ಇತ್ತ, ಸತತ ಮೂರನೇ ದಿನವೂ ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಇಂದು ಒಂದೇ ದಿನಕ್ಕೆ ಬೆಳ್ಳಿ 10ಸಾವಿರ ರೂಪಾಯಿಯಷ್ಟು ಕುಸಿದಿದೆ.

. Ad Widget .

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು 310ರೂ ಇಳಿಕೆಯಾಗಿದ್ದು, 1 ಗ್ರಾಂ ಬೆಲೆ ಈಗ 12,730 ರೂ. ಆಗಿದ್ದು, 10 ಗ್ರಾಂ ಬೆಲೆನಲ್ಲಿ 3100ರೂ ಇಳಿಕೆಯಾಗಿ ಈಗ 22 ಕ್ಯಾರಟ್ ಚಿನ್ನದ ಬೆಲೆ 1,27,300 ರೂಪಾಯಿ ದಾಖಲಾಗಿದೆ.

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು 253ರೂ ಕುಸಿತ ಕಂಡುಬಂದಿದ್ದು, 1 ಗ್ರಾಂ ಬೆಲೆ ಈಗ 10,416ರೂ ಆಗಿದ್ದು, 10 ಗ್ರಾಂ ಬೆಲೆಯಲ್ಲಿ 2530ರೂ ಕುಸಿತವಾಗಿ 1,04,160 ರೂಪಾಯಿ ದಾಖಲಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಸತತ 3ನೇ ದಿನವೂ ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತವಾಗಿದ್ದು, ಇಂದು ಒಂದೇ ದಿನ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 10,000 ರೂ. ಕುಸಿತವಾಗಿದೆ. ಅಕ್ಟೋಬರ್‌ 31ರಂದು 1 ಗ್ರಾಂ ಬೆಳ್ಳಿ ಬೆಲೆಯಲ್ಲಿ 10 ರೂ ಕುಸಿತವಾಗಿದ್ದು, 200ರೂ ದಾಖಲಾಗಿದೆ. ಇತ್ತ ಪ್ರತಿ ಕೆ.ಜಿ ಬೆಳ್ಳಿ ಬೆಲೆಯಲ್ಲಿ ಸುಮಾರು 10 ಸಾವಿರ ರೂ ಇಳಿಕೆಯಾಗಿದ್ದು, 2 ಲಕ್ಷ ರೂಪಾಯಿ ದಾಖಲಿಸಿದೆ.

Leave a Comment

Your email address will not be published. Required fields are marked *