ಹಿರಿಯ ನಾಗರಿಕರ ವಿನಾಯ್ತಿ ರದ್ದು/ 5,875 ಕೋಟಿ ಹೆಚ್ಚಿನ ಆದಾಯ ಗಳಿಸಿದ ರೈಲ್ವೆ

ಸಮಗ್ರ ನ್ಯೂಸ್: ಹಿರಿಯ ನಾಗರಿಕರಿಗೆ ರೈಲುಗಳಲ್ಲಿ ನೀಡಲಾಗುತ್ತಿದ್ದ ವಿನಾಯ್ತಿ ದರದ ಟಿಕೆಟ್ ರದ್ದು ಮಾಡಿದ ಬಳಿಕ ಇಲಾಖೆಗೆ ರೂ. 5,875 ಕೋಟಿ ಹೆಚ್ಚಿನ ಆದಾಯ ಹರಿದುಬಂದಿದೆ ಎಂದು ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯ್ದೆ ಅರ್ಜಿಗೆ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

Ad Widget ... ..

ಕೋವಿಡ್ ಲಾಕ್‍ಡೌನ್‍ನಿಂದಾಗಿ 2020ರ ಮಾ.20ರಂದು ರೈಲುಗಳಲ್ಲಿ ಹಿರಿಯ ನಾಗರಿಕರ ಟಿಕೆಟ್ ವಿನಾಯ್ತಿಯನ್ನು ರದ್ದುಗೊಳಿಸಿದ ನಂತರ, ಈ ವರ್ಷದ ಜ.31ರವರೆಗೆ 13 ಕೋಟಿ ಪುರುಷ, 9 ಕೋಟಿ ಮಹಿಳೆ ಹಾಗೂ 33,700 ತೃತೀಯ ಲಿಂಗದ ಹಿರಿಯ ನಾಗರಿಕರು ರೈಲಿನಲ್ಲಿ ಪ್ರಯಾಣ ಮಾಡಿದ್ದಾರೆ.

Ad Widget

ಇದರಿಂದಾಗಿ ಇಲಾಖೆಗೆ 13,287 ಕೋಟಿ ರು. ಆದಾಯ ಹರಿದುಬಂದಿದೆ. ಈ ಸಂಖ್ಯೆಯಲ್ಲಿ ಪುರುಷರು ಹಾಗೂ ತೃತೀಯ ಲಿಂಗದವರ ಶೇ.40 ವಿನಾಯ್ತಿ ಹಾಗೂ ಮಹಿಳೆಯರ ಶೇ.50ರಷ್ಟು ವಿನಾಯ್ತಿ ತೆಗೆದರೆ ರೈಲ್ವೆಗೆ 5,875 ಕೋಟಿ ರು. ಹೆಚ್ಚಿನ ಆದಾಯ ಹರಿದುಬಂದಿದೆ ಎಂದು ಅರ್ಜಿದಾರ ಚಂದ್ರಶೇಖರ ಗೌರ್ ಮಾಹಿತಿ ಹಂಚಿಕೊಂಡಿದ್ದಾರೆ.

Leave a Comment

Your email address will not be published. Required fields are marked *