ನೀರವ್ ಮೋದಿಯ ಅಪಾರ್ಟ್‍ಮೆಂಟ್ ಮಾರಾಟ/ ಗ್ರೀನ್ ಸಿಗ್ನಲ್ ಕೊಟ್ಟ ಲಂಡನ್ ಹೈಕೋರ್ಟ್

ಸಮಗ್ರ ನ್ಯೂಸ್: ನೀರವ್ ಮೋದಿಗೆ ಸೇರಿದ ಲಂಡನ್ ಐಷಾರಾಮಿ ಅಪಾರ್ಟ್‍ಮೆಂಟ್ ಮಾರಾಟಕ್ಕೆ ಲಂಡನ್ ಹೈಕೋರ್ಟ್ ಅನುಮತಿ ನೀಡಿದ್ದು, ಈ ಅಪಾರ್ಟ್‍ಮೆಂಟನ್ನು 5.25 ಮಿಲಿಯನ್ ಪೌಂಡ್ ಮಾರಾಟ ಮಾಡಬಹುದು ಎಂದು ಹೈಕೋರ್ಟ್ ತಿಳಿಸಿದೆ.

Ad Widget ... ..

ವಿಚಾರಣೆಗೆ ಲಂಡನ್‍ನ ಥೇಮ್ಮೆಡ್ ಜೈಲಿನಿಂದ ವಜ್ರದ ವ್ಯಾಪಾರಿ ನೀರವ್ ಹಾಜರಾಗಿದ್ದು, ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ಮಾಸ್ಟರ್ ಜೇಮ್ಸ್ ಬೈಟೈಲ್, ಆಸ್ತಿಯನ್ನು 5.25 ಮಿಲಿಯನ್ ಅಥವಾ ಅದಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಲು ಅನುಮತಿಸುವುದು ಸಮಂಜಸವಾದ ನಿರ್ಧಾರ ಎಂದರು.

Ad Widget

ಇದೇ ಸಂದರ್ಭ ಮಾರಾಟದಿಂದ ಬರುವ ಆದಾಯವನ್ನು ಸುರಕ್ಷಿತ ಖಾತೆಯಲ್ಲಿ ಇರಿಸುವಂತೆ ಜಾರಿ ನಿರ್ದೇಶನಾಲಯ (ಇಡಿ) ಮಾಡಿದ ಮನವಿಗಳನ್ನು ಕೂಡಾ ಅವರು ಸ್ವೀಕರಿಸಿದರು.

Leave a Comment

Your email address will not be published. Required fields are marked *