ಕಿನ್ನಿಗೋಳಿ: ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್‌ ಪಲ್ಟಿ

ಸಮಗ್ರ ನ್ಯೂಸ್: ಟಿಪ್ಪರ್‌ ಚಾಲಕನ ನಿಯಂತ್ರಣ ತಪ್ಪಿ ತಗ್ಗು ಪ್ರದೇಶಕ್ಕೆ ಉರುಳಿದ ಬಿದ್ದ ಘಟನೆ ಕಿನ್ನಿಗೋಳಿ ಸಮೀಪದ ಶಿಬರೂರು ಸೇತುವೆ ಬಳಿ ನಡೆದಿದೆ.

Ad Widget ... ..

ಚಾಲಕನು ಮದ್ಯದ ಅಮಲಿನಲ್ಲಿ ಅತೀ ವೇಗದಿಂದ ವಾಹನ ಚಲಾಯಿಸಿದ್ದು, ಮೂಲ್ಕಿ ಕಡೆಯಿಂದ ಶಿಬರೂರು ಕಡೆಗೆ ಚಲಿಸುತ್ತಿದ್ದ ಟಿಪ್ಪರ್ ಬಟ್ಟಕೋಡಿ ಸಮೀಪದ ಶರಣ ಬಳಿ, ಹಾಗೂ ನಡುಗೋಡು ಸಮೀಪವೂ ಮತ್ತೊಂದು ವಾಹನಕ್ಕೆ ಢಿಕ್ಕಿ ಹೊಡೆಯುವುದು ಸ್ವಲ್ಪದರಲ್ಲೇ ತಪ್ಪಿತ್ತು. ಆದರೆ ಮುಂದೆ ಅತೀ ವೇಗದಿಂದ ಚಲಿಸಿದ ಟಿಪ್ಪರ್ ಶಿಬರೂರು ಸೇತುವೆಯ ಬಳಿ ತಗ್ಗು ಪ್ರದೇಶದ ಗದ್ದೆಗುರುಳಿ ಪಲ್ಟಿಯಾಗಿದೆ . ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ.

Ad Widget

Leave a Comment

Your email address will not be published. Required fields are marked *