ಉಡುಪಿ : ಕಾರಿಗೆ ಬೈಕ್ ಢಿಕ್ಕಿ ಸವಾರ ಮೃತ್ಯು

ಸಮಗ್ರ ನ್ಯೂಸ್ : ಬೈಕೊಂದು ನಿಂತಿದ್ದ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ನಿಟ್ಟೂರು ಕಾಂಚನ ಹುಂಡೈ ಕಾರಿನ ಶೋರೂಮ್ ಎದುರುಗಡೆ ಉಡುಪಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ನಡೆದಿದೆ.

Ad Widget ... ..

ಸ್ವಸ್ತಿಕ್ ಮೃತ ಬೈಕ್ ಸವಾರ. ಇವರು ಮಾ.7ರಂದು ಮಧ್ಯರಾತ್ರಿ ವೇಳೆ ಬೈಕಿನಲ್ಲಿ ನಿಟ್ಟೂರು ಕಡೆಯಿಂದ ಉಡುಪಿ ಕರಾವಳಿ ಕಡೆಗೆ ಹೋಗುತ್ತಿದ್ದು, ಅತೀವೇಗದಿಂದ ಚಲಾಯಿಸಿದ ಪರಿಣಾಮ ಬೈಕ್, ಶೋರೂಮಿನ ಎದುರುಗಡೆ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ ಕಾರಿಗೆ ಢಿಕ್ಕಿ ಹೊಡೆದಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ.

Ad Widget

ಇದರ ಪರಿಣಾಮ ಸವಾರ ಸ್ವಸ್ತಿಕ್ ಬೈಕ್ ಸಮೇತ ಬಿದ್ದು ಗಂಭೀರವಾಗಿ ಗಾಯಗೊಂಡರು. ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು ಇಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *