ಗಗನಕ್ಕೇರಿದ ಬೆಳ್ಳುಳ್ಳಿ ದರ| ಬೆಳೆ ಕಾಯಲು ಸಿಸಿಟಿವಿ ಕ್ಯಾಮರಾ ಅಳವಡಿಕೆ

ಸಮಗ್ರ ನ್ಯೂಸ್: ಮಹಾರಾಷ್ಟ್ರದಲ್ಲಿ 600 ರೂ. ಗಡಿ ದಾಟಿದ್ದು, ಬೆಳ್ಳುಳ್ಳಿ ಬೆಲೆ ಹೆಚ್ಚಾದಂತೇ ಕೆಲವೆಡೆ ಕಳ್ಳತನ ಪ್ರಕರಣಗಳು ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಮಧ‍್ಯಪ್ರದೇಶದಲ್ಲಿ ಕೆಲವು ರೈತರು ತಮ್ಮ ಬೆಳೆ ಕಾಯಲು ಸಿಸಿಟಿವಿ ಕ್ಯಾಮರಾ ಹಾಕಿಸಿಕೊಂಡಿದ್ದಾರೆ.

Ad Widget ... ..

ನಮ್ಮ ದಿನನಿತ್ಯದ ಅಡುಗೆಯಲ್ಲಿ ಬಳಸುವ ಬೆಳ್ಳುಳ್ಳಿಯನ್ನು ಬಿಡುವಂತೆಯೂ ಇಲ್ಲ, ಖರೀದಿಸುವಂತೆಯೂ ಇಲ್ಲ ಎಂಬ ಸ್ಥಿತಿ ಗ್ರಾಹಕರದ್ದಾಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ಬೆಳ್ಳುಳ್ಳಿಗೆ ಈ ಮಟ್ಟಿಗೆ ಬೆಲೆ ಏರಿಕೆಯಾಗಿದ್ದ ಉದಾಹರಣೆಯೇ ಇಲ್ಲ.

Ad Widget

ಇದೀಗ ಬೆಳ್ಳುಳ್ಳಿಗೆ ಬೆಲೆ ಬಂದಿರುವುದರಿಂದ ರೈತರೂ ಬೆಳೆ ಬೆಳೆಯಲು ಮುಂದಾಗುತ್ತಿದ್ದಾರೆ. ಕೆಲವು ದಿನದ ನಂತರ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ. ಆದರೆ ಅಲ್ಲಿಯವರೆಗೆ ತಮ್ಮ ಬೆಳೆ ಕಳುವಾಗದಂತೆ ತಡೆಯುವುದೇ ರೈತರಿಗೆ ದೊಡ್ಡ ತಲೆನೋವಾಗಿದೆ.

Leave a Comment

Your email address will not be published. Required fields are marked *