ಮಗುವಿಗೆ ವಿಷವಿಟ್ಟು ತಾಯಿಯು ಆತ್ಮಹತ್ಯೆ| ಚಿಕಿತ್ಸೆ ಫಲಕಾರಿ ಆಗದೇ 3 ವರ್ಷದ ಮಗು ಸಾವು

ಸಮಗ್ರ ನ್ಯೂಸ್: ಮಗುವಿನ ಜೊತೆ ವಿಷ ಕುಡಿದು ತಾಯಿಯ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಗೋದೂರ ಗ್ರಾಮದಲ್ಲಿ ನಡೆದಿದೆ. 3 ವರ್ಷದ ಮಗು ದೀಕ್ಷಿತ್ ಗೌಡ ಸಾವನ್ನಪ್ಪಿದರೆ, ಅಸ್ವಸ್ಥ ತಾಯಿ ಪೂರ್ಣಿಮಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Ad Widget ... ..

ಇನ್ನು ಲಕ್ಷ್ಮಣ ರೇಖೆ ಎಂಬ ಹೆಸರಿನ ಜಿರಳೆಗಿಡುವ ವಿಷ ಇದಾಗಿದ್ದು, ತಾಯಿ ಪೂರ್ಣಿಮಾ ತಾನೂ ಕುಡಿದು, ಮಗುವಿಗೂ ವಿಷವುಣಿಸಿದ್ದಾರೆ. ಸತತ ವಾಂತಿ ಹಾಗೂ ಭೇದಿಯಿಂದ ಮಗು ಕೊನೆಯುಸಿರೆಳೆದಿದೆ. ಇದೀಗ ದಯಾನಂದ ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ಮಾಡಲಾಗುತ್ತಿದ್ದು, ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ

Ad Widget

Leave a Comment

Your email address will not be published. Required fields are marked *