ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ನಕಲಿ ವೈದ್ಯರ ಹಾವಳಿ|ಯೂಟ್ಯೂಬ್ ನೋಡಿ ಮೆಡಿಕಲ್ ಶಾಪ್​ನಲ್ಲಿ ಚಿಕಿತ್ಸೆ

ಸಮಗ್ರ ನ್ಯೂಸ್: ಸಿಲಿಕಾನ್ ಸಿಟಿನಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ಎಂಬಿಬಿಎಸ್ ಮಾಡಿಲ್ಲ ಅಂದ್ರೂ ವೈದ್ಯರೆಂದು ಹೇಳಿಕೊಂಡು ಜನರ ಜೀವನದ ಜೊತೆ ಆಟ ಆಡುತ್ತಿದ್ದಾರೆ. ಈ ಹಿಂದೆ ಸರ್ಕಾರ ನಕಲಿ ವೈದ್ಯರಿಗೆ ಕಡಿವಾಣ ಹಾಕಲು ಅನೇಕ ಕ್ರಮಗಳನ್ನು ಕೈಗೊಂಡಿತ್ತು. ಆದರೂ ನಗರದಲ್ಲಿ ನಕಲಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಿ ಹಣ ಸಂಪಾದಿಸುತ್ತಿದ್ದಾರೆ. ಸದ್ಯ ಇದೀಗ ಬೆಂಗಳೂರಿನಲ್ಲಿ ನಕಲಿ ವೈದ್ಯನೊಬ್ಬ ಸಿಕ್ಕಿಬಿದ್ದಿದ್ದಾನೆ. ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದ ವ್ಯಕ್ತಿಯೋರ್ವ ತಾನೊಬ್ಬ ವೈದ್ಯ ಎಂದು ಹೇಳಿಕೊಂಡು ಯೂಟ್ಯೂಬ್ ನೋಡಿ ಚಿಕಿತ್ಸೆ ನೀಡಿರುವ ಘಟನೆ ನಡೆದಿದೆ.

Ad Widget ... ..

ಸಂಜಯ್ ನಗರದ ವಾರ್ಡ್ 35, ಅಶ್ವಥ್ ನಗರದಲ್ಲಿ ಮೆಡಿಕಲ್ ಸ್ಟೋರ್ ನಲ್ಲಿಯೇ ರೋಗಿಯೊಬ್ಬರಿಗೆ ಟ್ರೀಟ್ಮೆಂಟ್ ಕೊಡ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮೆಡ್ ಜೋನ್ ಎಂಬ ಮೆಡಿಕಲ್​ ಶಾಪ್​ನಲ್ಲಿ ಮಾಲೀಕ ಮಹೇಶ್ ಕುಮಾರ್ ಎಂಬುವವರು ಬಿಹಾರ ಮೂಲದ ಕಾರ್ಮಿಕನಿಗೆ ಚಿಕಿತ್ಸೆ ನೀಡಿ 10 ಸಾವಿರ ಬಿಲ್ ಮಾಡಿ ಹಣ ಪೀಕಿದ್ದಾರೆ, ಮಹೇಶ್ ಕುಮಾರ್ ಅವರು ತಾನೊಬ್ಬ ವೈದ್ಯ ಎಂದು ಹೇಳಿಕೊಂಡು ಮೆಡಿಕಲ್ ಶಾಪ್​ನಲ್ಲೇ ಬಿಹಾರ್ ಮೂಲದ ಕಾರ್ಮಿಕನಿಗೆ ಯೂಟ್ಯೂಬ್ ನೋಡಿ 6 ಸಲ ಟ್ರಿಟ್ಮೆಂಟ್ ನೀಡಿದ್ದಾರೆ. ಯೂಟ್ಯೂಬ್ ನೋಡ್ಕೊಂಡು ಕಾಲಿಗೆ ಬ್ಯಾಂಡೇಜ್ ಕಟ್ಟುವುದು, ಇಂಜೆಕ್ಷನ್ ಹಾಕುವುದನ್ನು ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.

Ad Widget

ಇದನ್ನೆಲ್ಲ ಗಮನಿಸಿದ ಸ್ಥಳೀಯರು ಮೆಡಿಕಲ್ ಮಾಲೀಕನನ್ನ ವಿಚಾರಿಸಿ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ನು ಈ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹೇಶ್ ಕುಮರ್, ನಾನು ಮಾನವೀಯತೆ ದೃಷ್ಟಿಯಿಂದ ಬ್ಯಾಂಡೇಜ್ ಕಟ್ಟಿ ಸಹಾಯ ಮಾಡಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ಇಲ್ಲಿಯ ಸ್ಥಳೀಯ ಹುಡುಗರ ಗುಂಪು ಉದ್ದೇಶ ಪೂರ್ವಕವಾಗಿ ಆರೋಪ ಮಾಡಿದ್ದಾರೆ. ಗಲಾಟೆ ಮಾಡಲು ಬಂದಾಗ ಭಯದಿಂದ ಒಪ್ಪಿಕೊಂಡೆ. ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *