ನಾಳೆ(ಜ.2) ಸುಳ್ಯ ಮೆಸ್ಕಾಂನ ಉಪವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಸಮಗ್ರ ನ್ಯೂಸ್: ಜ.2 ನೇ ಮಂಗಳವಾರದಂದು ಸುಳ್ಯ ಮೆಸ್ಕಾಂನ ಉಪವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

Ad Widget ... ..

33 ಕೆ.ವಿ. ಮಾಡಾವು ಬೆಳ್ಳಾರೆ, 33 ಕೆ.ವಿ. ಗುತ್ತಿಗಾರು ವಿದ್ಯುತ್ ಮಾರ್ಗಗಳಲ್ಲಿ ಮತ್ತು 11 ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು‌ ಹಮ್ಮಿಕೊಂಡಿರುವುದರಿಂದ 110/33 ಕೆ.ವಿ. ಮಾಡಾವು ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 33 ಕೆ.ವಿ. ಗುತ್ತಿಗಾರು ಮತ್ತು 33/11 ಕೆ.ವಿ. ಬೆಳ್ಳಾರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆ.ವಿ. ಬೆಳ್ಳಾರೆ 1, ಬೆಳ್ಳಾರೆ 2, ನೆಟ್ಟಾರು, ಕಳಂಜ, ಮುರುಳ್ಯ, ಪೆರ್ಲಂಪಾಡಿ, ಚೊಕ್ಕಾಡಿ ಫೀಡರುಗಳಲ್ಲಿ ಬೆಳಗ್ಗೆ 10 ರಿಂದ ಸಾಯಂಕಾಲ 6 ರ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ‌ಪ್ರಕಟಣೆ ತಿಳಿಸಿದೆ.

Ad Widget

Leave a Comment

Your email address will not be published. Required fields are marked *