ಸುಳ್ಯ: ಮದ್ಯದ ನಶೆಯಲ್ಲಿ ಹೆತ್ತವರ ಮೇಲೆ ಕತ್ತಿ ಬೀಸಿದ ಪುತ್ರ| ಆರೋಪಿಯನ್ನು ಹೆಡೆಮುರಿ ಕಟ್ಟಿದ ಪೊಲೀಸರು

ಸಮಗ್ರ ನ್ಯೂಸ್: ಕುಡಿತದ ನಶೆಯಲ್ಲಿ ಹೆತ್ತ ತಂದೆ ತಾಯಿ ಮೇಲೆ‌ ಮಗನೋರ್ವ ಕತ್ತಿಬೀಸಿದ ಘಟನೆ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕಲ್ಪಣೆಯಲ್ಲಿ ನ.20ರ ರಾತ್ರಿ ನಡೆದಿದೆ.

Ad Widget ... ..

ಕೊಡಿಯಾಲ ನಿವಾಸಿಗಳಾದ ಮಂಜುನಾಥ್, ಧರ್ಮಾವತಿ ಗಾಯಗೊಂಡ ದಂಪತಿಗಳು ಎಂದು ತಿಳಿದುಬಂದಿದೆ. ಮಗ ದೇವಿ ಪ್ರಸಾದ್ ಎಂಬಾತ ಕುಡಿದ ಮತ್ತಿನಿಂದ ಜಾಗದ ವಿಚಾರವಾಗಿ ತಕರಾರು ಎದ್ದು ತಂದೆ ತಾಯಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

Ad Widget

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಮಗನನ್ನು ಪೊಲೀಸರು ಬಂದಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ತಂದೆ-ತಾಯಿಯನ್ನು ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Comment

Your email address will not be published. Required fields are marked *