ಮಗಳನ್ನು ಪ್ರೀತಿಸಿದಕ್ಕೆ ಪ್ರಿಯಕರನ ಕೊಂದ ಅಪ್ಪ

ಸಮಗ್ರ ಸಮಾಚಾರ: ಬೆಂಗಳೂರಿನಲ್ಲಿ ಮಗಳ ಮರ್ಯಾದೆ ಉಳಿಸಲು ತಂದೆಯೆ ಪ್ರಿಯಕರನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.
ಮಗಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಪಾಗಲ್ ಪ್ರೇಮಿಯ ಉಸಿರನ್ನ ಯುವತಿಯ ತಂದೆ ನಿಲ್ಲಿಸಿದ್ದಾರೆ. ಡೇವಿಡ್ ಕೊಲೆಯಾದ ಯುವಕ. ಮಂಜುನಾಥ್ ಎಂಬವರ ಮಗಳನ್ನು ಡೇವಿಡ್ ಪ್ರೀತಿಸುವಂತೆ ಪೀಡಿಸುತ್ತಿದ್ದನು. ಇದೇ ವಿಚಾರವಾಗಿ ಒಂದೂವರೆ ವರ್ಷದ ಹಿಂದೆ ರಾಜಿ ಪಂಚಾಯ್ತಿಯೂ ನಡೆದಿತ್ತು. ಮಗಳ ತಂಟೆಗೆ ಬರದಂತೆ ಡೇವಿಡ್​ಗೆ ಎಚ್ಚರಿಕೆ ನೀಡಲಾಗಿತ್ತು. ಆದ್ರೂ ಡೇವಿಡ್ ತನ್ನ ಚಾಳಿಯನ್ನು ನಿಲ್ಲಿಸಿರಲಿಲ್ಲ. ಮದುವೆ ಮಾಡಿಕೊಡಿ ಇಲ್ಲವಾದ್ರೆ ಖಾಸಗಿ ಫೋಟೋಗಳನ್ನು ರಿವೀಲ್ ಮಾಡುತ್ತೀನಿ ಎಂದು ಬೆದರಿಕೆ ಹಾಕಿದ್ದನು. ಇದರಿಂದ ಕೋಪಗೊಂಡ ಮಂಜುನಾಥ್ ಪ್ಲಾನ್ ಮಾಡಿ ಡೇವಿಡ್ ಉಸಿರು ನಿಲ್ಲಿಸಿದ್ದಾರೆ.

. Ad Widget . Ad Widget

ಮದುವೆ ವಿಷಯ ಮಾತನಾಡೋಣ ಬಾ ಎಂದು ಕರೆಸಿ ರಾಡ್ ನಿಂದ ಹೊಡೆದು ಚಾಕು ಹಾಕಿ ನಂತರ ಹಾಲೋ ಬ್ರಿಕ್ಸ್ ಎತ್ತಿಹಾಕಿ ಕೊಲೆ ಮಾಡಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಅಶೋಕನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಮಂಜುನಾಥ್ ನನ್ನು ವಶಕ್ಕೆ ಪಡೆದಿದ್ದಾರೆ.

. Ad Widget . . Ad Widget . Ad Widget

Leave a Comment

Your email address will not be published. Required fields are marked *