ಮನೆಗೆ ನುಗ್ಗಿದ ರಾಕೇಟ್ ಪಟಾಕಿ|ಬಟ್ಟೆ, ಸಾಮಾಗ್ರಿ ದಹಿಸಿದ ಬೆಂಕಿ

ಸಮಗ್ರ ನ್ಯೂಸ್: ದೀಪಾವಳಿ ಹಬ್ಬಕ್ಕೆ ಹಚ್ಚಿದ ರಾಕೇಟ್ ಪಟಾಕಿ ಮನೆಯೊಳಗೆ ನುಸುಳಿದ ಪರಿಣಾಮ ಬಟ್ಟೆ ಹಾಗೂ ಇತರೆ ಸಾಮಾಗ್ರಿಗಳು ಸುಟ್ಟು ನಷ್ಟ ಉಂಟಾಗಿರುವ ಘಟನೆ ವರದಿಯಾಗಿದೆ.

Ad Widget ... ..

ಮಡಿಕೇರಿಯ ಮಹದೇವಪೇಟೆ ರಸ್ತೆಯಲ್ಲಿರುವ ಕನಿಕಾ ಪರಮೇಶ್ವರಿ ದೇವಾಲಯ ಮುಂಭಾಗದಲ್ಲಿ ಬಶೀರ್ ಎಂಬುವವರಿಗೆ ಸೇರಿದ ಕಟ್ಟಡವಿದ್ದು ಈ ಮನೆಯಲ್ಲಿ ನಯಾಜ್ ಎಂಬುವರು ಬಾಡಿಗೆಗೆ ವಾಸವಾಗಿದ್ದಾರೆ. ರಾತ್ರಿ ಯಾರೋ ಬೆಂಕಿ ಹೊತ್ತಿಸಿ ಹಾರಿ ಬಿಟ್ಟ ರಾಕೇಟ್ ಪಟಾಕಿ ಮನೆಯ ಕಿಟಕಿ ಮೂಲಕ ಹಾದು ಬಂದು ಸಿಡಿದಿದೆ.

Ad Widget

ಇದರಿಂದ ಬಟ್ಟೆ ಹಾಗೂ ಇತರೆ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು ಅಂದಾಜು ರೂ. 15000 ನಷ್ಟ ಸಂಭವಿಸಿದೆ. ಮಾಹಿತಿ ಅರಿತು ಸಕಾಲಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿ ಸಂಭವನೀಯ ಹೆಚ್ಚಿನ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Comment

Your email address will not be published. Required fields are marked *