ಸುಳ್ಯ: ಆಟೋಗೆ ಡಿಕ್ಕಿ ಹೊಡೆದ ಓಮ್ನಿ| ಆಟೋ ಚಾಲಕ ಸಾವು; ಸಹಪ್ರಯಾಣಿಕ ಗಂಭೀರ

ಸಮಗ್ರ ನ್ಯೂಸ್: ಅಟೋ ರಿಕ್ಷಾಕ್ಕೆ ಓಮ್ನಿ ಢಿಕ್ಕಿ ಹೊಡೆದು ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟ ಘಟನೆ ಸುಳ್ಯದ ಹಳೆಗೇಟಿನಲ್ಲಿ ನ.5ರಂದು ರಾತ್ರಿ ಸಂಭವಿಸಿದೆ.

Ad Widget ... ..

ಜಾಲ್ಸೂರಿನಿಂದ ಸುಳ್ಯಕ್ಕೆ ಪ್ರಯಾಣಿಕರೋರ್ವರನ್ನು ಬಿಟ್ಟು ಹಿಂತಿರುಗುತ್ತಿದ್ದ ಜಾಲ್ಸೂರು ಗ್ರಾಮದ ಅರಿಯಡ್ಕದ ಬಾಬು ಪಾಟಾಳಿ ಎಂಬವರು ಚಲಾಯಿಸುತ್ತಿದ್ದ ಅಟೋರಿಕ್ಷಾ ಹಳೆಗೇಟು ಪೆಟ್ರೋಲ್ ಪಂಪ್ ಬಳಿ ಮುಂಭಾಗದಿಂದ ಬರುತ್ತಿದ್ದ ಓಮ್ನಿಗೆ ಢಿಕ್ಕಿ ಹೊಡೆದಿದೆ.

Ad Widget

ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ಚಾಲಕ ಬಾಬು ಪಾಟಾಳಿ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಸಹ ಪ್ರಯಾಣಿಕ ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ.

Leave a Comment

Your email address will not be published. Required fields are marked *