ಸಮಗ್ರ ನ್ಯೂಸ್: ಪ್ರೀತಿಸುತ್ತಿದ್ದ ಯುವತಿ ತಿರುಗಾಡಲು ಬರಲಿಲ್ಲ ಎಂದು ಕೋಪಗೊಂಡು ಆಕೆಯ ಪಿಜಿಗೆ ಕಲ್ಲೆಸೆದ ಯುವಕನಿಗೆ ಸಾರ್ವಜನಿಕರಿಂದ ಧರ್ಮದೇಟು ನೀಡಿದ ಘಟನೆ ಮಂಗಳೂರು ನಗರದಲ್ಲಿ ಸಂಭವಿಸಿದೆ.
ಸುಳ್ಯ ನಿವಾಸಿ ಲೈಟಿಂಗ್ ಕೆಲಸ ಮಾಡುತ್ತಿದ್ದ ವಿವೇಕ್ (18) ಎಂಬಾತ ಬೆಂದೂರು ಬಳಿ ಪಿಜಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಐನ್ನು ಪ್ರೀತಿಸುತ್ತಿದ್ದ. ಗುರುವಾರ ಸಂಜೆ ಆಕೆ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದು ತನ್ನ ಜತೆ ತಿರುಗಾಡಲು ಬರುವಂತೆ ಕರೆ ಮಾಡಿದ್ದಾನೆ. ಆದರೆ, ಯುವತಿ ಆತನೊಂದಿಗೆ ಸುತ್ತಾಟಕ್ಕೆ ಬರಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಯುವಕ ಆಕೆ ಕೆಲಸ ಮಾಡುತ್ತಿದ್ದ ಪಿಜಿಗೆ ಕಲ್ಲು ಎಸೆದಿದ್ದಾನೆ.
ಕಲ್ಲೆಸೆತದಿಂದ ಕಟ್ಟಡದ ಗಾಜು ಪುಡಿಯಾಗಿದ್ದು, ಸಾರ್ವಜನಿಕರು ಯುವಕನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ.